ಗ್ರಾಮದಲ್ಲಿ ಮೂವರು ಕೋವಿಡ್ ಗೆ ಬಲಿ..! : ಕೊಣ್ಣೂರು ಗ್ರಾಮದಲ್ಲಿ ಆತಂಕ..!

Futuristic coronavirus cells abstract background with glowing low polygonal virus cells and text on dark blue background. Immunology, virology, epidemiology concept. Vector illustration.

ಕೊಣ್ಣೂರ: ಕೋವಿಡ್ 19 ಮಹಾಮಾರಿಯ ಎರಡನೇ ಅಲೆಯು ಗ್ರಾಮೀಣ ಪ್ರದೇಶಕ್ಕೂ ಆವರಿಸಿದ್ದು ತಿಳಿದಿರುವ ವಿಷಯ, ಗ್ರಾಮದಲ್ಲಿ ಮಹಾಮಾರಿ ತನ್ನ ಅಟ್ಟಹಾಸ ಮೆರದಿದ್ದು ಸುಮಾರು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಕೆಲವರು ಗುಣಮುಖರಾಗಿದ್ದಾರೆ. ಮಹಾಮಾರಿಗೆ ಮೂವರು ಗ್ರಾಮಸ್ಥರು ಬಲಿಯಾಗಿದ್ದಾರೆ. ಮೂವರ ಪೈಕಿ ಇಬ್ಬರು ಗ್ರಾಮದ ಧುರಿಣರು ಸಾಮಾಜಿಕ ಕಾರ್ಯಕರ್ತರು ಆಗಿದ್ದರು. ವಾರದ ಅಂತರದಲ್ಲಿ ಮೂರು ಜೀವಗಳು ಕೋವೀಡ್ 19 ಗೆ ತುತ್ತಾಗಿದ್ದು ಗ್ರಾಮಸ್ಥರಲ್ಲಿ ಭಯ ಮನೆಮಾಡಿದೆ.
ಗ್ರಾಮ ಪಂಚಾಯತ ಹಾಗೂ ಟಾಸ್ಕ್ ಫೋರ್ಸ್ ಸಮಿತಿವತಿಯಿಂದ ಈಗಾಗಲೇ ವಿವಿಧ ವ್ಯಾಪಾರಸ್ಥರಿಗೆ, ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದೆಂದು ನೋಟಿಸ್ ಜಾರಿಮಾಡಲಾಗಿದೆ. ಗ್ರಾಮಸ್ಥರು ಹಾಗೂ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಮಹಾಮಾರಿಯಿಂದ ಜಾಗೃತರಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಿದ್ದಾರೆ.
ಇನ್ನೂ ಗ್ರಾಮ ಪಂಚಾಯತಿ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಆದೇಶದಂತೆ ತರಕಾರಿ ವ್ಯಾಪಾರಸ್ತರು ಬಿದಿ ಬಿದಿ ಒತ್ತುವ ಗಾಡಿ ಮೂಲಕ ವ್ಯಾಪಾರ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹಾಲು ಮತ್ತು ಔಷಧ ಅಂಗಡಿಗಳು, ದವಾಖಾನೆ ಕೋವೀಡ್ 19 ನಿಯಮಾವಳಿಗಳನ್ನು ಪಾಲಿಸುತ್ತಾ ಬಾಗಿಲು ತೆರದಿವೆ.

ಜನರು ಭಯ ಪಡುವುದಕ್ಕಿಂತ ಮುಂಜಾಗೃತಾ ಕ್ರಮಗಳನ್ನು ಪಾಲಿಸುವುದು ಅವಶ್ಯಕವಾಗಿದೆ. ತಮ್ಮಷ್ಟಕ್ಕೆ ತಾವೆ ಜಾಗೃತರಾಗುವುದು ಅವಶ್ಯವಾಗಿದೆ. ಮಹಾಮಾರಿಯು ಗಾಳಿಯ ವೇಗದಲ್ಲಿ ಹಳ್ಳಿ ಪಟ್ಟಣ ಅನ್ನದೆ ಹರಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಈಗಾಗಲೆ ಹೆಳಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಿಸಿ ನೀರು ಬಿಸಿ, ಊಟ, ಕಷಾಯ ಉಪಯೋಗಿಸುತ್ತಾ ಮನೆಯಲ್ಲಿ ಇರುವದು ಉತ್ತಮವಾದ ಕೆಲಸ.


-ಡಾ. ರಾಜಶೇಖರ ವಾರದ, ಸ್ಥಳೀಯ ವೈದ್ಯ

Exit mobile version