ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ಪಡೆಯಲು ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ

ದೆಹಲಿ: ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದು ಗುಜರಾತ್, ರಾಜಸ್ಥಾನ, ಛತ್ತೀಸ್ಘಾಡ್ಸೇರಿದಂತೆ 13 ಜಿಲ್ಲೆಗಳಲ್ಲಿ ನೆಲೆನಿಂತ ಹಿಂದೂ, ಸಿಖ್, ಜೈನ, ಬೌದ್ಧ ಹಾಗು ಮುಸ್ಲಿಮೇತರರಿಗೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಭಾರತ ಸರ್ಕಾರ ಅರ್ಜಿ ಆಹ್ವಾನಿಸಿದೆ.
1955ರ ಪೌರತ್ವ ಕಾಯ್ದೆ ಅಡಿಯಲ್ಲಿ ಮತ್ತು 2009 ರ ಕಾನೂನಿನಡಿಯಲ್ಲಿ ರೂಪಿಸಲಾದ ನಿಯಮಗಳಡಿಯಲ್ಲಿ ಈ ಆದೇಶವನ್ನು ಅನುಷ್ಠಾನಗೊಳಿಸಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. 2019 ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಗೆ ಇದು ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
2019 ರ ಪೌರತ್ವ ತಿದ್ದು ಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಸರ್ಕಾರ ಇನ್ನೂ ನಿಯಮಗಳನ್ನು ರೂಪಿಸಿಲ್ಲ. ಇದು ಜಾರಿಗೆ ಬಂದಾಗ, ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆದವು. ದೆಹಲಿಯಲ್ಲಿ 2020ರ ಆರಂಭದಲ್ಲಿ ಹಿಂಸಾಚಾರವೇ ನಡೆದಿತ್ತು.ದೇಶಾದ್ಯಂತ ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೂ 2020 ಡಿಸೆಂಬರ್ನಲ್ಲಿ ಸಿಎಎ ಅಂಗೀಕರಿಸಲ್ಪಟ್ಟಿತು.
ಇದೀಗ ಭಾರತ ಸರ್ಕಾರ 1955ರ ಪೌರತ್ವ ಕಾಯ್ದೆ ಅಡಿಯಲ್ಲಿ ಮೊರ್ಬಿ, ರಾಜ್ ಕೋಟ್, ಪಠಾಣ್, ವಡೋದರಾ, ದುರ್ಗ್ ,ಛತ್ತೀಸ್ ಗಢದ ಬಾಲೋಡಬಜಾರ್, ಜಾಲೊರ್, ಉದಯ್ ಪುರ, ಪಾಲಿ,ಬರ್ಮೆರ್, ಮತ್ತು ರಾಜಸ್ಥಾನದ ಶಿರೊಹಿ, ಹರಿಯಾಣದ ಪರಿದಾಬಾದ್, ಪಂಜಾಬ್ ನ ಜಲಂಧರ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ನಿರಾಶ್ರಿತರು ಭಾರತೀಯ ಪೌರತ್ವ ಪಡೆಯಲು ಅರ್ಜಿಸಲ್ಲಿಸಲು ಅರ್ಹರಾಗಿದ್ದಾರೆಂದು ತಿಳಿಸಲಾಗಿದೆ. ಹಾಗು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

Exit mobile version