ರಾಜ್ಯದಲ್ಲಿ ಕೊವೀಡ್ ಕರ್ಫ್ಯೂ : ಏನಿರುತ್ತೆ…? ಏನಿರಲ್ಲ…?

ಬೆಂಗಳೂರು: ನಾಳೆ ಸಂಜೆಯಿಂದ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಲಾಕ್‌ಡೌನ್‌’ ಮಾಡಲಾಗುವುದರ ಬಗ್ಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಬಸ್‌ ಸಂಚಾರ ಇರೋದಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಗುತ್ತದೆ. ಕಟ್ಟಡ ಕಾಮಗಾರಿಗಳಿಗೆ, ಗಾರ್ಮೆಂಟ್‌ ವಲಯಗಳನ್ನು ಹೊರತು ಪಡಿಸಿ ಉತ್ಪಾದನ ವಲದಯದ ಕಾರ್ಖಾನೆಗಳ ಕೆಲಸಕ್ಕೆ ಅವಕಾಶ ನೀಡಲಾಗಿದೆ. ಇನ್ನೂ ಅವಶ್ಯಕವಾಗಿರುವ ಸೇವೆಗಳನ್ನು ಹೊರತು ಪಡಿಸಿ ಎಲ್ಲವನ್ನು ಬಂದ್‌ ಮಾಡಲು ಅವಕಾಶ ನೀಡಲಾಗಿದೆ ಬೆಳಗ್ಗೆ 6ರಿಂದ 10ರ ತನಕ ಅವಕಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ ಅಂತ ಅಂತ ಹೇಳಿದರು.

ಈಗ ಹೇರಿರುವ 15 ದಿನಗಳ ಲಾಕ್ ಡೌನ್ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಕ್ರಮಗಳನ್ನು ನೋಡಿಕೊಂಡು ಕ್ರಮಗಳನ್ನು ಕೈಗೊಳ್ಳಲಾಗುವುದು. ಒಂದು ವೇಳೆ ಈ ಸಮಯದಲ್ಲಿ ಪರಿಸ್ಥಿತಿ ಸುಧಾರಿಸದೇ ಹೋದ್ರೆ ಮತ್ತೆ ಒಂದು ವಾರ ಲಾಕ್‌ಡೌನ್ ಮಾಡಲಾಗುವುದು ಎಂದರು.

ಏನು ಇರುತ್ತದೆ?

ಮೆಡಿಕಲ್‌ ಶಾಪ್‌, ಬ್ಯಾಂಕ್‌, ಎಟಿಎಂ ಸೇವೆ, ರಕ್ತನಿಧಿ ಕೇಂದ್ರ, ಆಸ್ಪತ್ರೆ – ಕ್ಲಿನಿಕ್‌ಗಳು, ಬಾರ್‌, ದಿನಸಿ ಅಂಗಡಿ  (ನಿಗದಿತ ಸಮಯದಲ್ಲಿ ತೆರೆಯಲು ಅವಕಾಶ, ಬೆಳಗ್ಗೆ ಆರರಿಂದ ಹತ್ತರ ತನಕ ಅವಕಾಶ) ಅವಕಾಶವಿರುತ್ತದೆ.

ಏನು ಇರೋಲ್ಲ?

ಬಾರ್‌, ಶಾಲಾ-ಕಾಲೇಜು, ಅಂತರ್‌ ಜಿಲ್ಲೆ, ರಾಜ್ಯ ಓಡಾಟ,  ಬಸ್‌ ಸಂಚಾರ (ಕೆಎಸ್‌ಆರ್‌ಟಿಸಿ,ಬಿಎಂಟಿಸಿ, ಮೆಟ್ರೋ ಸಂಚಾರ) ಗೂಡ್ಸ್‌, ಖಾಸಗಿ ವಾಹನಗಳ ಓಡಾಡಕ್ಕೆ ಬಂದ್‌. ಆದ್ರೆ ಅಂತರ್‌ ಜಿಲ್ಲೆಗಳ ಗೂಡ್ಸ್‌ ವಾಹನಗಳ ಓಡಾಡಕ್ಕೆ ಮಾತ್ರ ಅವಕಾಶವಿದೆ.

Exit mobile version