ಬೆಂಗಳೂರು : ಕೊರೋನಾ ಹಿನ್ನಲೆಯಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪರಿತರ ಚೀಟಿ ಹೊಂದಿದವರಿಗೆ 5 ಕೆ.ಜಿ ಅಕ್ಕಿ ವಿತರಸಲಿದೆ ಎಂದು ವಿಧಾನಪರಿಷತ್ ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ತಿಳಿಸಿದ್ದಾರೆ.
ಕಳೆದ ಬಾರಿ ದೇಶದಲ್ಲಿ ಕೊರೋನಾ ಸೋಂಕು ಹರಡಿದರ ಹಿನ್ನಲೇ ಜನರಿಗೆ ಅನ್ನದ ಕೊರತೆ ಇರದಿರಲಿ ಎಂದು ಕೇಂದ್ರ ಸರ್ಕಾರ ಉಚಿತವಾಗಿಅಕ್ಕಿ ವಿತರಿಸಿತು. ಈಗ ಮತ್ತೆ ಕೊರೋನಾ ಸೋಂಕು ದೇಶದಲ್ಲಿ ಬಂದು ಜನರ ಜೀವನ ತತ್ತರಗೊಳಿಸುತ್ತಿದೆ. ಆದ್ದರಿಂದ ಜನರ ಹಿತದೃಷ್ಠಿಯಿಂದ ಪ್ರಧಾನಿ ಮೋದಿ ಅವರ ಸರ್ಕಾರ ಮೇ ಮತ್ತು ಜೂನ್ ತಿಂಗಳಲ್ಲಿ 26 ಸಾವಿರ ಕೋಟಿ ರೂ. ನಲ್ಲಿ ದೇಶದ 80 ಕೋಟಿ ಜನರಿಗೆ ಉಚಿತವಾಗಿ 5 ಕೆ.ಜಿ ಪಡಿತರ ವಿತರಿಸಲಿದ್ದಾರೆ ಎಂದು ತಮ್ಮ ಅಧಿಕೃತ ಟ್ವೀಟ್ ನಲ್ಲಿ ಟ್ವೀಟ್ ಮಾಡಿದ್ದಾರೆ.
