ಬೆಂಗಳೂರು : ಪರದೆಯಲ್ಲಿ ಮುಖ ತೋರಿಸಿದರೆ ದೇಶದಲ್ಲಿ ಕೊರೊನಾ ಸೋಂಕು ಓಡಿಹೋಗಲ್ಲ ಎಂದು ಸಿದ್ದರಾಮಯ್ಯ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಧಾನಿ ಮೋದ ಅವರನ್ನು ಟೀಕಿಸಿದ್ದಾರೆ.
ಪದೇ ಪದೇ ಸಿಎಂ ಗಳಿಗೆ ಪಾಠ ಮಾಡುವುದಕ್ಕೆ ನೀವು ಹೆಡ್ ಮಾಸ್ಟರ್ ಅಲ್ಲ. ಪರದೆ ಮೇಲೇ ನಿಮ್ಮ ಮುಖ ತೋರಿಸುವುದರಿಂದ ಯಾವುದೇ ಕೊರೋನಾ ಸೋಂಕು ಹೋಗಲ್ಲ. ರಾಜ್ಯಗಳು ಸೋಂಕು ನಿಯಂತ್ರಣಕ್ಕಾಗಿ ಕೇಂದ್ರದ ಎದುರು ಬೇಡಿಕೆಗಳಿಟ್ಟಿವೆ. ಅವುಗಳನ್ನು ಈಡೇರಿಸುವ ಮೂಲಕ ದೇಶವನ್ನು ಸೋಂಕು ಮುಕ್ತಮಾಡಿ. ಆಗಲೇ ದೇಶದಲ್ಲಿ ಸೋಂಕು ನಿಯಂತ್ರಣವಾಗುತ್ತದೆ. ಅದೆಲ್ಲ ಬಿಟ್ಟು ಪರದೆಯಲ್ಲಿ ಮುಖ ತೋರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೊದಲು ರಾಜ್ಯಗಳ ಬೇಡಿಕೆ ಈಡೇರಿಸುವಲ್ಲಿ ಮುಂದಾಗಿ ಎಂದು ಆಗ್ರಹಿಸಿದ್ದಾರೆ.
