ಏ.10 ರಿಂದ ಈ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ

ಬೆಂಗಳೂರು: ಸಾರಿಗೆ ಮುಷ್ಕರ ಹೊತ್ತಲ್ಲೇ ಸರ್ಕಾರ ನೈಟ್‍ಕರ್ಫ್ಯೂ ಜಾರಿ ಮಾಡಿದೆ.  ಈ ಮೂಲಕ ಜನಸಾಮಾನ್ಯರಿಗೆ ಏಕಕಾಲಕ್ಕೆ ಎರಡು ಆಘಾತ ಕಾದಿದೆ. ಏ.10 ರಿಂದ ರಾಜ್ಯದ 8 ನಗರಗಳಲ್ಲಿ ನೈಟ್‍ಕರ್ಫ್ಯೂ ಹೇರಲಾಗಿದೆ. ಇತ್ತ ಶನಿವಾರದಿಂದ ಸತತ 4 ದಿನ ರಜೆ ಇರುತ್ತದೆ. ಹೀಗಾಗಿ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ತೀವ್ರ ಸಂಕಷ್ಟ ಎದುರಾಗಿದೆ.

ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ 11 ರಾಜ್ಯಗಳ ಸಿಎಂಗಳ ಸಭೆಯ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ನೈಟ್‍ಕರ್ಫ್ಯೂ ಜಾರಿಗೊಳಿಸಿ ಸಿಎಂ ಬಿಎಸ್‍ವೈ ಆದೇಶಿಸಿದ್ದಾರೆ.

ಏ.10ರಿಂದ ಅಂದರೆ ಶನಿವಾರದಿಂದ ಏಪ್ರಿಲ್ 20ರವರೆಗೆ ರಾಜ್ಯದ 8 ನಗರಗಳ ವ್ಯಾಪ್ತಿಯಲ್ಲಷ್ಟೇ ಸೀಮಿತಗೊಳಿಸಿ ನೈಟ್‍ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಬೆಂಗಳೂರು ನಗರ, ಮಂಗಳೂರು, ಉಡುಪಿ, ಮಣಿಪಾಲ್, ತುಮಕೂರು, ಬೀದರ್, ಕಲಬುರಗಿ, ಮೈಸೂರು ನಗರದಲ್ಲಿ ನೈಟ್‍ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯದ 8 ನಗರಗಳಿಗೆ ಸೀಮಿತಗೊಳಿಸಿ ಏ. 10 ರಿಂದ ಏ.20ರವರೆಗೆ ನೈಟ್‍ಕರ್ಫ್ಯೂ ಹೇರಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ವಾಣಿಜ್ಯ ಚಟುವಟಿಕೆಗಳ ಮೇಲೆ ಮತ್ತೆ ನೈಟ್‍ಕರ್ಫ್ಯೂ ಬರೆ ಬೀಳಲಿದ್ದು, ರಾತ್ರಿ 10 ಗಂಟೆಯಿಂದ ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಲಿದೆ. 7 ಜಿಲ್ಲೆಗಳ 8 ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳಾದ ಹೋಟೆಲ್, ರೆಸ್ಟೋರೆಂಟ್, ಪಬ್‍ಗಳೂ ಬಂದ್ ಆಗಲಿದೆ. ಅಗತ್ಯ ಚಟುವಟಿಕೆಗಳಿಗಷ್ಟೇ ನೈಟ್‍ಕರ್ಫ್ಯೂ ವೇಳೆ ವಿನಾಯ್ತಿ ನೀಡಲಾಗುತ್ತದೆ. ನೈಟ್‍ಕರ್ಫ್ಯೂ ವೇಳೆ ಸಿನಿಮಾ ಪ್ರದರ್ಶನ ನಿಷೇಧ ಹಾಗೂ ಅಂತರ್ಜಿಲ್ಲೆಗಳ ಓಡಾಟಕ್ಕೆ ನಿರ್ಬಂಧ ಇಲ್ಲ. ಅಂತರ್‍ಜಿಲ್ಲೆ ಓಡಾಟ, ಬಸ್, ಸ್ವಂತ ವಾಹನಗಳಲ್ಲಿ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ.

Exit mobile version