ಕಸಾಪ ಜಿಲ್ಲಾಧ್ಯಕ್ಷ ಶರಣು ಹೇಳಿಕೆ: ಸಾಹಿತ್ಯ ಭವನಗಳ ಕಾಮಗಾರಿ ಪೂರ್ಣಗೊಳಿಸಿದ ಹೆಮ್ಮೆ ಇದೆ

ಲಕ್ಷ್ಮೇಶ್ವರ: ರಾಜ್ಯಕ್ಕೆ ಮಾದರಿಯಾದ ಜಿಲ್ಲಾ ಸಾಹಿತ್ಯ ಭವನ ಕಳೆದ 24 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೋಣ ತಾಲೂಕ ಕನ್ನಡ ಸಾಹಿತ್ಯ ಭವನಗಳು ನಮ್ಮ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಹಾಲಿ ಅಧ್ಯಕ್ಷ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಡಾ.ಶರಣು ಗೋಗೇರಿ ಹೇಳಿದರು.

 ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಮುಂಡರಗಿ, ನರಗುಂದ ಹಾಗೂ ಲಕ್ಷ್ಮೇಶ್ವರ ಸಾಹಿತ್ಯ ಭವನಗಳು ರೂ.50 ಲಕ್ಷ ವೆಚ್ಚಗಳಲ್ಲಿ ನಿರ್ಮಾಣವಾಗುತ್ತಿದ್ದು ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರವಿ ಗುಂಜೀಕರ, ವಿ.ಎಮ್.ಹಿರೇಮಠ, ಎಮ್.ಕೆ.ಲಮಾಣಿ, ಎಸ್.ಎಸ್.ಸೋಮಣ್ಣವರ, ಶರಣಬಸವ ಕೊಟಗಿ, ಕೆ.ಎ.ಹಿರೇಮಠ, ಜಯಶ್ರೀ ಹೊಸಮನಿ ಅನೇಕರು ಇದ್ದರು.

Exit mobile version