ಸಿಎಂ ಪದಕಕ್ಕೆ 115 ಪೊಲೀಸ್ ಸಿಬ್ಬಂದಿ ಆಯ್ಕೆ

ಬೆಂಗಳೂರು: ಉತ್ತಮ ಸೇವೆ ಸಲ್ಲಿಸಿದ ರಾಜ್ಯದ 115 ಪೊಲೀಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಿದೆ.

ಭ್ರಷ್ಟಚಾರ ನಿಗ್ರಹ ದಳ (ಬೆಂಗಳೂರು) ಎಸ್‌ಪಿ ಉಮಾಪ್ರಶಾಂತ್, ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಕೆ.ಎಸ್.ವೆಂಕಟೇಶ ನಾಯ್ಡು, ಸಿಐಡಿ ಆರ್ಥಿಕ ವಿಭಾಗ ಡಿವೈಎಸ್‌ಪಿ ಪಿ.ಕೆ.ಮುರಳೀಧರ, ಆಂತರಿಕ ಭದ್ರತಾ ವಿಭಾಗ ತಾಂತ್ರಿಕ ಶಾಖೆಯ ಡಿವೈಎಸ್‌ಪಿ ಎಂ.ಜೆ. ಬಾಲಾಜಿ ಸಿಂಗ್, ಹಾವೇರಿ ಜಿಲ್ಲೆ ಶಿಗ್ಗಾವಿ ಕೆಎಸ್‌ಆರ್‌ಪಿ 10ನೇ ಪಡೆ ಸಹಾಯಕ ಕಮಾಂಡೆಂಟ್ ವಿಶ್ವನಾಥ ರೆಡ್ಡಿ, ಮೈಸೂರು ನಗರ ಸಿಸಿಬಿ ಎಸಿಪಿ ಸಿ.ಕೆ. ಅಶ್ವತ್ಥ ನಾರಾಯಣ, ಎಸಿಬಿ (ಬೆಂಗಳೂರು) ಡಿವೈಎಸ್‌ಪಿ ಗೋಪಾಲ ಡಿ. ಜೋಗಿನ, ಬೆಳಗಾವಿ ಉತ್ತರ ವಲಯ ಡಿವೈಎಸ್‌ಪಿ ಪ್ರಮೋದ್ ಎಸ್.

ಢಗ್ಗೆ, ಶಿವಮೊಗ್ಗ ಜಿಲ್ಲೆ ಡಿಎಆರ್ ಡಿವೈಎಸ್‌ಪಿ ಟಿ.ಪಿ. ಕೃಷ್ಣಮೂರ್ತಿ, ಬೆಂಗಳೂರಿನ ಬೆರಳು ಮುದ್ರೆ ತಜ್ಞ ಕೇಂದ್ರ ವಲಯ ಕಚೇರಿ ಡಿವೈಎಸ್‌ಪಿ ಮಂಜುನಾಥ ಬಿ. ಗುಂಜೀಕರ ಸೇರಿ 115 ಸಿಬ್ಬಂದಿಗಳು ಸಿಎಂ ಪದಕಕ್ಕೆ ಆಯ್ಕೆಯಾಗಿದ್ದಾರೆ.

Exit mobile version