ಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಸ್ಪರ್ಶಗೊಂಡು ಹೊಟ್ಟಿನ ಬಣವಿ ಸುಟ್ಟು ಕರಕಲಾದ ಘಟನೆ ಜರುಗಿದೆ.
ಗ್ರಾಮದ ರಮೇಶ ಸೋಮಣ್ಣವರ ಎಂಬುವರ ಹೊಟ್ಟಿನ ಬಣವಿ ಸುಟ್ಟು ಹೋಗಿದ್ದು, ವಿಷಯ ತಿಳಿದ ಗ್ರಾಪಂ ಸದಸ್ಯ ವೀರನಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಬೆಂಕಿಯನ್ನು ನಂದಿಸಿದ ಪರಿಣಾಮ ಅದರ ಸುತ್ತಮುತ್ತಲಿನ ಸುಮಾರು 10ಕ್ಕಿಂತ ಹೆಚ್ಚು ಬಣವಿಗಳು ಬಚಾವ್ ಆಗಿವೆ. ಇದರಿಂದ ಭಾರಿ ಪ್ರಮಾಣದ ಅಗ್ನಿ ಅವಘಡ ತಪ್ಪಿದಂತಾಗಿದೆ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
