ರಿಯಾಜ ಮನಿಯಾರ

ನರಗುಂದ: ಬೇಸಿಗೆ ಅವಧಿಯಲ್ಲಿ ತಾಲೂಕೀನ ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ ಒದಗಿಸುವ ಉದ್ದೇಶದಿಂದ ಮಹಾತ್ಮಗಾಂಧಿ ರಾಷ್ಟಿಯ ಉದ್ದಯೋಗ ಖಾತರಿ ಯೋಜನೆಯಡಿ ಮಾರ್ಚ 15 ರಿಂದ ಮೂರು ತಿಂಗಳವರೆಗೆ ದುಡಿಯೋಣ ಬಾ ಅಭಿಯಾನ ಹಮ್ಮಿಕೋಳ್ಳಲಾಗಿದೆ.

ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು. ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು. ಸ್ಥಳಿಯವಾವಾಗಿ ಉದ್ಯೋಗ ನೀಡಿ ಸ್ವಾವಲಂಭಿಗಳಾಗುವAತೆ ಮಾಡುವುದು. ಕೆಲಸ ಅಥವಾ ಕಾಮಗಾರಿಗೆ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ಅವರು ತಿಳಿಸಿದ್ದಾರೆ.

ಜನಜಾಗೃತಿ ಕಾರ್ಯಕ್ರಮ :- ಮಾರ್ಚ 15 ರಿಂದ ಮಾರ್ಚ 22 ರವರೆಗೆ ದುಡಿಯೋಣ ಬಾ ಅಭಿಯಾನ ಕುರಿತು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಒಂದು ಕುಟುಂಬವು ವರ್ಷದಲ್ಲಿ 100 ದಿನಗಳ ಕೆಲಸ ಮಾಡಲು ಅವಕಾಶ ಇದ್ದು ಬೇಸಿಗೆ ಅವಧಿಯಲ್ಲಿ 60 ದಿನಗಳು ಕೆಲಸ ಮಾಡಿದರೆ 16500 ರೂ ಗಳಿಸಬಹುದು. ಇದರಿಂದ ಮುಂಬರುವ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಮಕ್ಕಳ ಶಾಲಾ ಕಾಲೇಜು ಶುಲ್ಕ ಭರಿಸಲು ಅನುಕೂಲವಾಗುತ್ತದೆ ಎಂಬ ಅಂಶದ ಬಗ್ಗೆ ಗ್ರಾಮೀಣ ಜನರಲ್ಲಿ ಜನಜಾಗೃತಿ ಮೂಡಿಸಲಾಗುವುದು.

ಇದೇ ವೇಳೆ ಉದ್ಯೋಗ ಚೀಟಿ ಹೊಂದಿಲ್ಲದ ಕುಟುಂಬಗಳಿಗೆ ನಮೂನೆ-1 ರಲ್ಲಿ ಉದ್ಯೋಗಚೀಟಿಗಾಗಿ ಅರ್ಜಿ ಮತ್ತು ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳುವುದು, ನೊಂದಾಯಿತ ಕೂಲಿಕಾರರಿಂದ ನಮೂನೆ-6ರಲ್ಲಿ ಒಂದೇ ಬಾರಿಗೆ 3 ತಿಂಗಳ ಕೆಲಸದ ಬೇಡಿಕೆ ಪಡೆಯುವುದು ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕೆಲಸದ ಬೇಡಿಕೆ ಪಡೆಯಲು ಬೇಡಿಕೆ ಪೆಟ್ಟಿಗೆಗಳನ್ನು ಇಡುವುದು ಈ ಜನಜಾಗೃತಿ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ ಎಂದು ಹೇಳಿದ್ದಾರೆ.

ಕೂಲಿಕಾರರಿಗೆ ನಿರಂತರ ಕೆಲಸ:-ಏಪ್ರೀಲ್1 ರಿಂದ ಜೂನ್ 15 ರವರೆಗೆ ಪ್ರತಿ ಸೋಮವಾರ ಕೆಲಸದ ಬೇಡಿಕೆ ಪೆಟ್ಟಿಗೆ ತೆರೆದು ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರ ವಿವರಗಳನ್ನು ಎಂ,ಐ,ಎಸ್ ನಲ್ಲಿ ದಾಖಲಿಸುವುದು ಮತ್ತು 2 ದಿನಗಳೊಳಗೆ ಕೆಲಸ ಒದಗಿಸುವುದು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಶಿಶುಪಾಲನೆ ಸೌಲಭ್ಯಗಳನ್ನು ಕಲ್ಪಿಸುವುದು, ಕೂಲಿಕಾರಿಗೆ ನಿರಂತರವಾಗಿ ಕೆಸಲ ಒದಗಿಸಲು ಕ್ರಮಕೈಗೊಳ್ಳಲಾಗಿದೆ.

ರಾಯಭಾರಿ ನೇಮಕಕ್ಕೂ ಅವಕಾಶ :- ದುಡಿಯೋಣ ಬಾ ಅಭಿಯಾನದ ಅನುಷ್ಟಾನ ಮತ್ತು ಮೇಲ್ವಚಾರಣೆಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿಯಾನದ ಕಾಲಾವಧಿಗೆ ರಾಯಭಾರಿಯನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ನೇಮಕ ಮಾಡಿಕೊಳ್ಳಬಹುದು. ನರೇಗಾ ಕೂಲಿ ಕೆಲಸದಲ್ಲಿ ದೀರ್ಘಕಾಲ ಮೇಟ್ ಆಗಿ ಕಾರ್ಯನಿರ್ವಹಿಸಿ ಅನುಭವ ಇರುವವರಿಗೆ ರಾಯಭಾರಿಯಾಗಿ ನೇಮಿಸಬಹುದಾಗಿದೆ. ಬೇಸಿಗೆ ಕಾಲದಲ್ಲಿ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೃಷಿ ಚಟುವಟಿಕೆಗಳಲ್ಲಿ ಕೂಲಿಯ ಅವಕಾಶ ಕಡಿಮೆ ಇರುವುದರಿಂದ ಅಗತ್ವಿರುವ ಎಲ್ಲಾ ಜನರೂ ಗ್ರಾಮ ಪಂಚಾಯತಿಯಿಂದ ಉದ್ಯೋಗ ಚೀಟಿ ಪಡೆದು ಕೆಲಸಕ್ಕಾಗಿ ಬೇಡಿಕೆ ಅರ್ಜಿ ಸಲ್ಲಿಸಿ ನರೇಗಾ ಯೋಜನೆಯಿಂದ ಅನುಕೂಲ ಪಡೆಯುವಂತೆ ನರಗುಂದ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ತಿಳಿಸಿದ್ದಾರೆ.

2 comments
  1. ಗ್ರಾಮೀಣ ಭಾಗದಲ್ಲಿ ಇನ್ನೂ ಸರಿಯಾಗಿ ಮಳೆಯಾಗದ ಕಾರಣ ಕೃಷಿ ಕೂಲಿ ಕಾರ್ಮಿಕರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ವಿಕಲಚೇತನರಿಗೆ ಸರ್ಕಾರ ಕೊಡಮಾಡುವ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಈ ಉದ್ಯೋಗದಿಂದ ಬರುವ ಕೂಲಿ ಬದುಕಿಗೆ ಸಂಪೂರ್ಣ ಆಸರೆ ಆಗಬಹುದು ಅನ್ನುವುದು ಕ್ಲಿಷ್ಟಕರ ಸಮಯದಲ್ಲಿ ಬರುವ ಹಣ ಬಹಳ ಸದುಪಯೋಗವಾಗುತ್ತದೆ ಆದ್ದರಿಂದ ದುಡಿಯೋಣ ದುಡಿಯೋನು ಬಾ ಅನ್ನುವ ಯೋಜನೆ ಕೆಲಸ ಬಹಳ ಅಚ್ಚುಕಟ್ಟಾಗಿ ಕೂಲಿ ಕಾರ್ಮಿಕರು ಗ್ರಾಮೀಣ ಭಾಗದಲ್ಲಿ ಬಹಳ ಅನುಕೂಲಕರ ಆಗಿದೆ ಅಂತ ಈ ಸಂದರ್ಭದಲ್ಲಿ ಹೇಳಬಹುದು ಸರ್ಕಾರ ಕೋರೋಣದ ಮಧ್ಯ ಈ ಕೆಲಸ ಕೊಡುತ್ತಿರುವುದು ಗ್ರಾಮೀಣ ಭಾಗದ ಜನತೆಗೆ ಬಾಳ ಖುಷಿ ಅನಿಸಿದೆ ಸರ್ಕಾರಕ್ಕೆ ಧನ್ಯವಾದಗಳು

Leave a Reply

Your email address will not be published. Required fields are marked *

You May Also Like

ಕೊರೊನಾ ಕರ್ಪ್ಯೂಗೆ ಶಿರಹಟ್ಟಿ ಸಂಪೂರ್ಣ ಸ್ತಬ್ಧ..!

ಕೊರೊನಾ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ವೀಕೆಂಡ್ ಕಫ್ಯೂ೯ಗೆ ಶನಿವಾರ ಪಟ್ಟಣ ಸಂಪೂರ್ಣ ಸ್ಥಬ್ಧವಾದ ಚಿತ್ರಣ ಕಂಡು ಬಂದಿತು.

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ : ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಮೇಘನ್.ಎಚ್.ಕೆ

ಎಚ್.ಕೆ.ಮೇಘನ್: ನೀಟ್ ಪರೀಕ್ಷೆಯಲ್ಲಿ 5ನೇ ರ್ಯಾಂಕ್​ ಬಂದಿರುವುದು ಸಂತಸವನ್ನು ತಂದಿದೆ. ದೆಹಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೇರಬೇಕು ಎಂದುಕೊಂಡಿದ್ದೇನೆ. ವೈದ್ಯನಾಗಬೇಕೆಂಬ ಕನಸು ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಪ್ರೌಢಶಾಲೆಗೆ ಬಂದ ತಕ್ಷಣವೇ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಕರೊನಾ ರಜೆ ಸಿಕ್ಕ ಕಾರಣ ಓದಲು ಮತ್ತಷ್ಟು ಅವಕಾಶ ಸಿಕ್ಕಂತಾಯಿತು. ಈ ಸಾಧನೆಗೆ ಎಲ್ಲ ಪ್ರೋತ್ಸಾಹ ನೀಡಿದ ನನ್ನ ಪಾಲಕರಿಗೆ ಹಾಗೂ ಉಪನ್ಯಾಸಕರಿಗೆ ಧನ್ಯವಾದಗಳು ಎಂದು ಹೇಳಿ

ಎರಡನೇ ಪ್ರಿಯಕರನಿಂದ ಮೊದಲನೇ ಪ್ರಿಯಕರನ ಮೇಲಿನ ಸೇಡು ತೀರಿಸಿಕೊಂಡ ಪ್ರೇಯಸಿ!

ಶಿವಮೊಗ್ಗ : ಎರಡನೇ ಪ್ರಿಯಕರನಿಂದ ಮೊದಲ ಪ್ರಿಯಕರನನ್ನು ಪ್ರೇಯಸಿಯೇ ಕೊಲೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮುಂದಿನ ವರ್ಷದಿಂದ ಅರ್ಜಿ ಪಡೆದು ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ…!

ಬೆಂಗಳೂರು: ಮುಂದಿನ  ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜತೆ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.