ರಷ್ಯಾ : ವಿಮಾನದಲ್ಲಿದ್ದ ಮಹಿಳೆಯೊರ್ವಳು ಬಟ್ಟೆ ಬಿಚ್ಚಲು ಪದೇ ಪದೇ ಪ್ರಯತ್ನಿಸುತ್ತಿದ್ದಳು, ನಂತರ ಕ್ಯಾಬಿನ್ ಸಿಬ್ಬಂದಿ ಹಗ್ಗ ಮತ್ತು ಟೇಪ್ ನಿಂದ ಆಕೆಯನ್ನು ಸೀಟಿಗೆ ಕಟ್ಟಿದ ಘಟನೆ ನಡೆದಿದೆ.
39 ವರ್ಷದ ಮಹಿಳೆ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯ ಸೂಚನೆಯನ್ನೂ ಪಾಲಿಸದೇ, ವಿಚಿತ್ರವಾಗಿ ವರ್ತಿಸುತ್ತಿದ್ದಳು. ವಿಮಾನ ಟೇಕಾಫ್ ಆದ ಕೂಡಲೇ ಮಹಿಳೆ ತನ್ನ ಸೀಟಿನಿಂದ ಎದ್ದು ಕ್ಯಾಬಿನ್ ನಲ್ಲಿ ಯಾವುದೇ ಕಾರಣವಿಲ್ಲದೆ ಓಡಾಡಿದ್ದಾಳೆ. ವ್ಲಾಡಿವೊಸ್ಟೊಕ್ ನಗರದಿಂದ ಟೇಕ್ ಆಫ್ ಆದ 15 ನಿಮಿಷಗಳಲ್ಲಿ, ಮಹಿಳೆ ಬಟ್ಟೆ ಬಿಚ್ಚಿ ಕ್ಯಾಬಿನ್ ಸಿಬ್ಬಂದಿಯ ಸೂಚನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಮಾಡಲು ಮುಂದಾದಳು.
ಸ್ಥಳೀಯ ರಷ್ಯಾದ ಮಾಧ್ಯಮ ವರದಿಗಳ ಪ್ರಕಾರ, ಮಹಿಳೆಯನ್ನು ಸಾರಿಗೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ವಿಮಾನದಲ್ಲಿ ಬರುವ ಮುನ್ನ ಸಿಂಥೆಟಿಕ್ ಡ್ರಗ್ ಬಳಸಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಪ್ರಕರಣದ ತನಿಖೆ ಮುಂದುವರಿದಿದೆ.
