ಗಜೇಂದ್ರಗಡ: ಸ್ಕೌಟ್ಸ್ ಮತ್ತು ಗೈಡ್ಸಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಸ್ಕೌಟ್ಸ್ ಮತ್ತು ಗೈಡ್ಸ ತಾಲೂಕಾಧ್ಯಕ್ಷ ಶೀಥಲ ಬಾಗಮಾರ ಹೇಳಿದರು.
ಪಟ್ಟಣದಲ್ಲಿ ತಾಲೂಕಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಮೇಳ ಹಾಗೂ ಗುಂಪು ನಾಯಕರ ತರಬೇತಿ ಶಿಬಿರದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ, ಕೇವಲ ಅಂಕಗಳಿಕೆಯ ವಿಷಯಜ್ಞಾನ ನೀಡಿದರೆ ಶಿಕ್ಷಣ ಪರಿಪೂರ್ಣವಾಗುವುದಿಲ್ಲ. ಜೊತೆಗೆ ಸನ್ನಡತೆ, ಸದ್ಭಾವನೆ, ಶಿಸ್ತು, ಪ್ರೀತಿಮತ್ತು ಸೇವಾ ಮನೋಭಾವನೆ ನೀಡಿದ್ದಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗುತ್ತಾರೆ. ಇಂಥ ಶಿಸ್ತಿನ ಶಿಕ್ಷಣ ನೀಡುತ್ತಿರುವ ಸ್ಕೌಟ್ಸ್ ಮತ್ತುಗೈಡ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಪಾಲ್ಗೊಂಡು ಭಾರತದ ಆಸ್ತಿಯಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹೊರಹೊಮ್ಮುತ್ತಿರುವುದು ಸಂತಸ. ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಎಲ್ಲ ಶಾಲೆಗಳಲ್ಲಿ ಅಳವಡಿಸಲು ಮುಂದಿನ ದಿನಗಳಲ್ಲಿ ಆದ್ಯತೆ ನೀಡಬೇಕಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಪೂಜಾರ ಮಾತನಾಡಿ, ಬ್ರಿಟಿಷ್ ಆರ್ಮಿ ಅಧಿಕಾರಿ ರಾಜರ್ಟ್ ಬೇಡನ್ ಪಾವೆಲ್ ಸ್ಕೌಟ್ಸ್ ಮತ್ತು ಗೈಡ್ಸ ಸಂಸ್ಥಾಪಕ. ಭಾರತದಲ್ಲಿ 1909 ರಲ್ಲಿ ಸ್ಕೌಟ್ಸ್ ಆರಂಭವಾಯಿತು. ಪ್ರಸ್ತುತ ರಾಜ್ಯದಲ್ಲಿ ಲಕ್ಷಾಂತರ ಸ್ಕೌಟ್ಸ್ ಮತ್ತು ಗೈಡ್ಸ್ ಇದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಕಲಿಸುವ ಮೂಲಕ ಬದುಕಿನ ಮಾರ್ಗೋಪಾಯ ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದರು.
ಇದಕ್ಕೂ ಮುನ್ನ ಕೆ.ಜಿ.ಬಂಡಿ ಗಾರ್ಡನ್‌ನಿಂದ ಆರಂಭವಾದ ಜಾಗೃತಿ ಜಾಥಾ, ರೋಣ ರಸ್ತೆ, ಶ್ರೀ ಕಾಲಕಾಲೇಶ್ವರ ವೃತ್ತ, ದುರ್ಗಾ ವೃತ್ತ, ಜೋಡುರಸ್ತೆಯ ಮೂಲಕ ಸಂಚರಿಸಿ ಸಭೆ ನಡೆಯುವ ಸ್ಥಳ ತಲುಪಿತು.
ಅಂದಪ್ಪ ಸಂಕಣೂರ, ಪ್ರಭುಚವಡಿ, ಮೋಹನ ಕನಕೇರಿ, ಮಂಜುಳಾ ರೇವಡಿ, ಸುನಿತಾ ಗಡೇದವರ, ಎಸ್.ಕೆ. ಮಠದ, ಶಿವಕುಮಾರ, ಜಿ.ಎಸ್.ಪಾಟೀಲ, ಎಸ್.ಎಚ್.ಹಟ್ಟಿಮನಿ, ಬಿ.ಟಿ.ಹೊಸಮನಿ, ಎ.ಎಸ್.ನರಗುಂದ, ಆರ್.ಎಸ್.ಇಟಗಿ, ಸಿ.ಪಿ.ಹಿರೇಮಠ, ಎಸ್.ಟಿ.ಪೂಜಾರ ಬಸವರಾಜ ಹೊಸಗೌಡರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
