ಆಸ್ಪತ್ರೆ ಮಾಲೀಕರ ಮನೆ ಮೇಲೆ ಐಟಿ ದಾಳಿ

ಮಂಗಳೂರು : ಇಂದು ಬೆಳ್ಳಂಬೆಳ್ಳಗ್ಗೆಯೇ ಮಂಗಳೂರಲ್ಲಿ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ಮಂಗಳೂರಿನಲ್ಲಿ ಹೆಸರು ಮಾಡಿರುವ, ಎಜೆ ಶೆಟ್ಟಿ ಆಸ್ಪತ್ರೆ ಹಾಗೂ ಯೆನಪೋಯಾ ಆಸ್ಪತ್ರೆಯ ಮಾಲೀಕರ ಮನೆಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಮಂಗಳೂರು ನಗರದ ಬೆಂದೂರು ವೆಲ್ ನಲ್ಲಿರುವ ಎ.ಜೆ.ಆಸ್ಪತ್ರೆಯ ಮಾಲೀಕ ಎ.ಜೆ.ಶೆಟ್ಟಿ ಅವರ ಮನೆ ಹಾಗೂ ಯೆನಪೋಯಾ ಆಸ್ಪತ್ರೆಯ ಮಾಲೀಕ ವೈ.ಅಬ್ದುಲ್ಲಾ ಕುಂಜ್ಞಿ ಅವರ ಮನೆಗೆ ಆಗಮಿಸಿದ ಆದಾಯ ತೆರಿಗೆ ಅಧಿಕಾರಿಗಳು ಅದಾಯಕ್ಕೆ ಸಂಬಂಧಪಟ್ಟಂತೆ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಅಂತ ತಿಳಿದು ಬಂದಿದೆ.

Exit mobile version