ಯೋಗಿಶ್ ಗೌಡ ಹತ್ಯೆ ಪ್ರಕರಣ: ಬೆಂಗಳೂರಿಗೆ ಶಿಫ್ಟ್

ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯ ಯೋಗಿಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಮೇಲಿನ ಸಾಕ್ಷನಾಶ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟಗೆ ಶಿಫ್ಟ್ ಮಾಡಲಾಗಿದೆ.

ಧಾರವಾಡದ ಜೆಎಂಎಫ್ಸಿ ಕೋರ್ಟ್ ಗೆ ಈ ಕುರಿತು ಇಂದು ಆದೇಶ ಹೊರಡಿಸಿದೆ. ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗಿಶ್ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರನಲ್ಲಿ ಸಿಬಿಐ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಸದ್ಯ ಮಾಜಿ ಸಚಿವರು ಹಿಂಡಲಗಾ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕೈವಾಡವಿರುವ ಆರೋಪ ಹಾಗೂ ಕೊಲೆ ಕೇಸ್ ಮುಚ್ಚಿ ಹಾಕಿರುವ ಆರೋಪದ ಹಿನ್ನೆಲೆ ವಿನಯ್ ಜೈಲುವಾಸ ಅನುಭವಿಸುತ್ತಿದ್ದಾರೆ.

Exit mobile version