50 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ: ಹರ್ಷವರ್ಧನ್

ನವದೆಹಲಿ: ಮಾರ್ಚ್ನಿಂದ 50 ವರ್ಷ ಮೇಲ್ಪಟ್ಟವರಿಗೂ ಕೋವಿಡ್-19 ಲಸಿಕೆ ನೀಡಲು ನಾವು ಸಮರ್ಥರಿದ್ದೇವೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನೂ 18ರಷ್ಟು ಕೋವಿಡ್-19 ಲಸಿಕೆಗಳು ದೇಶದಲ್ಲಿ ಬಳಕೆಗೆ ಲಭ್ಯವಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 20-25 ದೇಶಗಳಿಗೆ ಭಾರತವು ಕೋವಿಡ್ ಲಸಿಕೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಶೇ 76.5 ಸಕ್ರಿಯ ಪ್ರಕರಣಗಳು ‘ಈವರೆಗೆ ದೇಶದಾದ್ಯಂತ ಶೇ 80ರಿಂದ 85 ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಸುಮಾರು 18ರಿಂದ 20 ಲಸಿಕೆಗಳು ಪ್ರಿಕ್ಲಿನಿಕಲ್, ಕ್ಲಿನಿಕಲ್ ಹಾಗೂ ಕ್ಲಿನಿಕಲ್‌ನ ನಂತರದ ಹಂತಗಳಲ್ಲಿವೆ. ಮುಂಬರುವ ತಿಂಗಳುಗಳಲ್ಲಿ ಅವುಗಳು ಬಳಕೆಗೆ ದೊರೆಯುವ ನಿರೀಕ್ಷೆ ಇಟ್ಟುಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.
‘ಕೋವಿಡ್ ಸಾಂಕ್ರಾಮಿಕ ಹರಡುವಿಕೆ ತಡೆಗೆ ಜನರು ಲಸಿಕೆ ಜತೆ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದೂ ಅಗತ್ಯವಾಗಿದೆ. ಕಳೆದ 7 ದಿನಗಳಲ್ಲಿ ದೇಶದ 188 ಜಿಲ್ಲೆಗಳಲ್ಲಿ ಒಂದೂ ಹೊಸ ಕೋವಿಡ್ ಪ್ರಕರಣ ವರದಿಯಾಗಿಲ್ಲ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

Exit mobile version