ಚೆನ್ನೈ: ತಮಿಳುನಾಡಿನ ತನ್ನ ಮನೆಯಯೊಂದರಲ್ಲಿ ಕೋತಿಗಳ ಗುಂಪೊAದು ತನ್ನ ಮಗುವನ್ನು ಕದ್ದೋಯ್ದ ಕೋತಿಗಳು ಸಾಯಿಸಿರುವ ಘಟನೆ ನಡೆದಿದೆ ಎನ್ನಲಾಗಿದೆ. ಶನಿವಾರ ಈ ಘಟನೆ ನಡೆದಿದ್ದು ಮಗುವಿನ ತಾಯಿ ಹೇಳುವ ಪ್ರಕಾರ, ಕೋತಿಗಳು ಮನೆಯ ಛಾವಣಿಯ ಹೆಂಚುಗಳನ್ನು ತೆಗೆದು, ಮಲಗಿದ್ದ ಶಿಶುಗಳನ್ನು ಕರೆದುಕೊಂಡು ಹೋದವು ಅಂತ ತಿಳಿಸಿದ್ದಾರೆ.
ಈ ವೇಳೆ ಮಗುವಿನ ತಾಯಿ ಭುವನೇಶ್ವರಿ ಅವರು, ಕೋತಿಗಳು ತಮ್ಮ ಮಗುವನ್ನು ತೆಗೆದಕೊಂಡು ನೋಡಿ ನಮಗೆ ಭಯವಾಯಿತು. ಮಂಗಗಳನ್ನು ದೂರ ಕ್ಕೆ ದೂಡಿ, ಅಕ್ಕಪಕ್ಕದವರ ಸಹಾಯ ವನ್ನು ಪಡೆಯಲು ಪ್ರಯತ್ನಿಸಿದೆ ಸ್ಥಳೀಯರು ಮಂಗವನ್ನು ಬೆನ್ನಟ್ಟಿದ್ದು, ಕೊಳವೊಂದರ ಬಳಿ ಮಗುವನ್ನು ಬಿಟ್ಟು ಮಂಗ ಓಡಿ ಹೋಗಿದೆ. ಆ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕಂದಮ್ಮ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಗುವನ್ನು ಕದ್ದೋಯ್ದ ಕೋತಿಗಳು
