ನಟ ಶ್ರೀವಾಸ್ತವ್ ಆತ್ಮಹತ್ಯೆಗೆ ಶರಣು


ಚೆನ್ನೈ:
ನಟ ಧನುಷ್ ಜೊತೆ ಎನ್ನೈ ನೋಕಿ ಪಾಯಂ ಥೋಟ್ಟ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಯುವ ನಟ ಶ್ರೀವಾಸ್ತವ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀವಾಸ್ತವ್ ಅವರು ಈಚೆಗೆ ತಮ್ಮ ತಂದೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಮಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಎನ್ನೈ ನೋಕಿ ಪಾಯಂ ಥೋಟ್ಟ ಚಿತ್ರದಲ್ಲಿ ಶ್ರೀವಾಸ್ತವ್ ನಟಿಸಿದ್ದರು. ಕೆಲ ಸಮಯದಿಂದ ಮಾನಸಿಕ ಸಮಸ್ಯೆಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಆಪ್ತರಿಂದ ತಿಳಿದು ಬಂದಿದೆ. ಇತ್ತೀಚೆಗೆ ಡಿಜಿಟಲ್ ವೆಬ್ ಸರಣಿ ವಲ್ಲಾಮೈ ಥರಯೋದಲ್ಲಿ ನಟಿಸಿ, ಜನಪ್ರಿಯತೆ ಗಳಿಸಿದ್ದರು.

Exit mobile version