ಜಕ್ಕಲಿ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥಾ

ನರೇಗಲ್ಲ್: ಸಮೀಪದ ಜಕ್ಕಲಿ ಗ್ರಾಮದ ಎಸ್ಎಜೆಡಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ಕೈಗೊಂಡರು.

ರಸ್ತೆಯುದ್ದಕ್ಕೂ ಪೋಲಿಯೊ ಲಸಿಕೆಯ ಮಹತ್ವ ಸಾರುವ ಘೋಷಣೆಗಳನ್ನು ಕೂಗುತ್ತ. 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕಾ ಕಡ್ಡಾಯವಾಗಿ ಕೇಂದ್ರಕ್ಕೆ ಕರೆದುಯ್ದು ತಪ್ಪದೇ ಲಸಿಕೆ ಹಾಕಿಸುವಂತೆ ಪಾಲಕರಲ್ಲಿ ಜಾಗೃತಿ ಮೂಡಿಸಿದರು.

ಜಾಥಾ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯ ಬಿ.ಆರ್.ಗದಗಿನ, ಶಾಲೆ ಸಿಬ್ಬಂದಿಗಳಾದ ವಿ.ವಿ.ಅಣ್ಣಿಗೇರಿ, ಸಿ.ವಿ.ಅಂಬಿಗೇರ, ಎ.ಎಸ್.ರೋಣದ, ಯು.ಎಸ್.ಕಣವಿ, ಡಿ.ಎಸ್.ಆಲಮೇಲ್, ಎಸ್ ಎನ್.ದೆವಗಿರಿಕರ ಉಪಸ್ಥಿತರಿದ್ದರು.

Exit mobile version