ಮೈಸೂರು: ರಾಜ್ಯದ ಎಸ್.ಟಿ ಕಾರ್ಯಕಾರಿ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಎಸ್.ಟಿ ಸಮುದಾಯ ಒತ್ತಾಯಿಸಿದೆ.
ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಎಸ್.ಟಿ. ಮೋರ್ಚಾದ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಎಸ್.ಟಿ. ಮೋರ್ಚಾದ ಸದಸ್ಯರು ಘೋಷಣೆಯಿಂದ ಬೇಸರ ವ್ಯಕ್ತಪಡಿಸಿದ ಕಟೀಲ್, ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುವ ಮೂಲಕ ಇದು ರಾಜ್ಯ ಎಸ್.ಟಿ ಕಾರ್ಯಕಾರಿ ಸಭೆ. ನಮ್ಮದು ಶಿಸ್ತುಬದ್ದ ಪಕ್ಷವಾಗಿದೆ. ಇಂತಹದಕ್ಕೆ ಈ ಪಕ್ಷದಲ್ಲಿ ಅವಕಾಶ ಕಲ್ಪಿಸಲ್ಲ ಎಂದರು.
