ಅದ್ಭುತ ಕನಸುಗಾರ ಯುವ ಉದ್ಯಮಿ ಅಬ್ದುಲ್ ಖದೀರ್: ಜನಮನ್ನಣೆಯತ್ತ ಖದೀರ್, ಪರಿಸರ ಸ್ನೇಹಿ ಉದ್ಯಮದ ಖದರ್

abdul khadir

abdulkhadir shirahatti from gadag

ಸಮಯವನ್ನು ನಾವು ಬೆನ್ನತ್ತಿದಾಗ ಮಾತ್ರ ಸಾಧನೆ ನಮ್ಮ ಸಾಮಿಪ್ಯಕ್ಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ತಪಸ್ಸಿನಂತೆ ಸಾಧನೆ ಜಪ ಮಾಡಿದ ಯುವಕ ಇದೀಗ ಯುವಶಕ್ತಿ ಪಾಲಿಗೆ ಚೈತನ್ಯದ ಚಿಲುಮೆಯಾಗಿದ್ದಾನೆ. ಮಾದರಿ ಉದ್ಯಮದ ಮೂಲಕ ಬಹುದೊಡ್ಡ ಉದ್ಯಮಿಯಾಗುವ ಲಕ್ಷಣ ಹೊಂದಿದ್ದಾನೆ.

ಕಟ್ಟುವ ಕೆಲಸ ಅಷ್ಟೊಂದು ಸುಲಭವಾದದ್ದಲ್ಲ. ಆದರೆ, ಕಟ್ಟುವ ಆ ಕಾಯಕದಲ್ಲಿನ ಶ್ರಮ, ತ್ಯಾಗ, ಸಮಯ ಇವೆಲ್ಲವೂ ಒಂದು ತಪಸ್ಸೆ ಸರಿ. ಇವಗಳ ಸದ್ಭಳಕೆ ಮಾಡಿಕೊಂಡಾತ ಮಾತ್ರ ಸಾಧನೆಯ ಹಾದಿಯಲ್ಲಿ ಗುರಿತಲುಪಲು ಸಾಧ್ಯ ಎನ್ನುವುದಕ್ಕೆ ಗದಗ ನಗರದ ಯುವ ಉದ್ಯಮಿ ಅಬ್ದುಲ್ ಖದೀರ್ ಶಿರಹಟ್ಟಿ ತಾಜಾ ಉದಾಹರಣೆಯಾಗಿದ್ದಾರೆ.

ತಂದೆ-ತಾಯಿ ಜೊತೆಗೆ ಯುವ ಉದ್ಯಮಿ ಅಬ್ದುಲ್ ಖದೀರ್

ಕಂಪನಿಯ ಕನಸು ಕಟ್ಟಿಕೊಂಡ ಅಬ್ದುಲ್ ಖದೀರ್ ಒಬ್ಬ ಮದ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಆದರೆ, ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ, ಸಾಧನೆಯ ದಾಹ, ಹೊಸದತರತ್ತ ಆಲೋಚನೆ, ಸಂಶೋಧನೆಯ ಸಹನೆ ಇವೆಲ್ಲ ಖದೀರ್ ಹುಟ್ಟು ಗುಣವಾಗಿದ್ದವು. ಈ ಕಾರಣದಿಂದಾಗಿಯೇ ಅಬ್ದುಲ್ ಖದೀರ್ ಇದೀಗ ಒಬ್ಬ ಉದ್ಯಮಿ ಮಾತ್ರವಲ್ಲ, ಸಂಶೋಧಕ, ಯುವಕರ ಪ್ರೇರಕನಾಗಿ ನಮ್ಮ ಮದ್ಯ ಒಬ್ಬ ವಿಭಿನ್ನ ವ್ಯಕ್ತಿತ್ವ ಹೊಂದಿದ ಯುವ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಬಾಲ್ಯದಲ್ಲಿನ ಒಂದು ಘಟನೆ…

ಕುಟುಂಬದಲ್ಲಿ ದಾರದ ಉಂಡೆ ತಯಾರಿಕಾ ಕೈಗಾರಿಕೆಯನ್ನು ಸ್ಥಾಪಿಸಿದ್ದರು. ಆದರೆ, ಅದ್ಯಾಕೋ ಅವರ ಕೈ ಹಿಡಿಯಲಿಲ್ಲ. ಒಂದು ದಿನ ಅನಿರೀಕ್ಷಿತವಾಗಿ ಅಬ್ದುಲ್ ಆ ಹಾನಿಗೊಳಗಾದ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿದಾಗ ದಾರದ ಉಂಡೆಗಳು ಅನಾಥವಾಗಿ ಬಿದ್ದಿದ್ದವು. ಯಂತ್ರಗಳು ನಿರ್ವಹಣೆ ಇಲ್ಲದೇ ಕಳೆ ಗುಂದಿದ್ದವು. ಇನ್ನೇನು ಎಲ್ಲ ಸಾಮಾಗ್ರಿಗಳ ಜೊತೆಗೆ ಗುಜರಿ ಅಂಗಡಿಗೆ ಹೋಗಬೇಕಿದ್ದ ದಾರದ ಉಂಡೆಗಳನ್ನು ತೆಗೆದುಕೊಂಡು ಬಂದ ಅಬ್ದುಲ್ ಕಟ್ಟಿಗೆಗೆ ದಾರ ಸುತ್ತಿ ಆಗಲೇ ಮಾರಾಟ ಮಾಡಿ ಅದರಲ್ಲಿ ಒಂದು ಹಣದಿಂದ ಸೈಕಲ್ ಹಾಗೂ ಐಪೋರ್ಡ ತೆಗೆದುಕೊಂಡಿದ್ದನAತೆ. ಅಂದರೆ ಆಗಿನ್ನು ಅಬ್ದುಲ್ 11 ವರ್ಷದ ಬಾಲಕ.

ಉಪನ್ಯಾಸ ನೀಡುತ್ತಿರುವ ಖದೀರ್

ಎಂಥ ವಿಚಿತ್ರ ಅಲ್ವಾ.? ಐದನೇ ತರಗತಿ ಮಗುವಿನಲ್ಲಿ ಇಂಥದ್ದೊAದು ವ್ಯಾಪಾರಿ ಮನಸ್ಸು ಆಗಲೇ ಹುಟ್ಟಿದ್ದನ್ನು ನಾವು ಗಮನಿಸಬಹುದು. ಅಷ್ಟಕ್ಕೂ ಆ ವಯಸ್ಸಿನಲ್ಲಿ ಕಂಡಿದ್ದನ್ನು ಬೇಡುವ ಸ್ವಭಾವ ಎಲ್ಲ ಮಕ್ಕಳಲ್ಲಿ ಸಾಮನ್ಯ. ಅದೇ ರೀತಿ ಅಬ್ದುಲ್ ಕೂಡ ತನ್ನ ತಾಯಿಗೆ ಸೈಕಲ್ ಕೊಡಿಸುವಂತೆ ಪೀಡಿಸಿದ್ದಾನೆ. ಮಗನ ಕಾಟಕ್ಕೆ ಕೋಪಗೊಳ್ಳದ ತಾಯಿ ಮಗನಿಗೆ ಸಂತೈಸಿ, ಸಮಾಧಾನ ಮಾಡಿ, ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ತನ್ನ ತಂದೆ ದಾರದ ಉಂಡೆ ತಯಾರಿಕಾ ಘಟಕ ಮಾಡಿ ಕೈಸುಟ್ಟುಕೊಂಡಿದ್ದನ್ನು ತಿಳಿಸಿದ್ದಾರೆ. ಇದರಿಂದ ತನ್ನ ಕುಟುಂಬದ ಆರ್ಥಿಕ ಸ್ಥಿತಿಯ ಬಗ್ಗೆ ಆಗಲೇ ಯೋಚನೆ ಶುರು ಮಾಡಿ ನಂತರ ದಾರದ ಉಂಡೆಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ಸೈಕಲ್ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೂರಾರ್ಜಿ ದೇಶಾಯಿ ಶಾಲೆಯಲ್ಲಿ ಶಿಕ್ಷಣ

ಕಿರಿಯ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾದ್ಯಮದಲ್ಲಿ ಶಿಕ್ಷಣ ಪಡೆದ ಖದೀರ್ ಗೆ ಮುಂದೆ ಇಂಗ್ಲೀಷ್ ಮಿಡಿಯಮ್ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಯಿಂದ ಅಬ್ದುಲ್ ಖದೀರ್ ಸರ್ಕಾರಿ ಶಾಲೆಗೆ ಸೇರಬೇಕಾಯಿತು. ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದ. ವಿದ್ಯಾರ್ಥಿ ದಿಸೆಯಿಂದಲೇ ಹಾಸ್ಟೆಲ್ ನಲ್ಲಿದ್ರೂ ನಿರಂತರ ಚಟುವಟಿಕೆ, ಕ್ರೀಯಾಶೀಲತೆ, ಸಂಶೋಧನೆಯ ಜೊತೆಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ ಅಬ್ದುಲ್, ಒಬ್ಬ ಕ್ರೀಡಾಪಟು ಕೂಡ

ಕಾರ್ಖಾನೆಯಲ್ಲಿ ಸಿಬ್ಬಂದಿಗಳೊAದಿಗೆ ಅಬ್ದುಲ್ ಖದೀರ್

ಹೌದು. ಇಂತಹ ಆರ್ಥಿಕ ಸಂಕಷ್ಟದ ಮದ್ಯದಲ್ಲಿಯೇ ಛಲ ಬಿಡದೇ ಓದಿದ ಈತ ಎಂಜನೀಯರಿAಗ್ ಪದವಿ ಕೂಡ ಪಡೆದುಕೊಂಡ. ಇನ್ನೇನು ಪದವಿ ಮುಗಿತು, ಮನೆಯ ಜವಾಬ್ದಾರಿಗಳು, ಆರ್ಥಿಕ ಪರಿಸ್ಥಿತಿಯಿಂದಾಗಿ ಜವಾಬ್ದಾರಿಗಳು ಹೆಗಲೇರಿದ್ದವು. ಖದೀರ್‌ಗೆ ಆತನ ಬಗೆಗಿನ ಕನಸೇ ಬೇರೆಯದಾಗಿತ್ತು. ತಾನೊಬ್ಬ ಉದ್ಯಮಿಯಾಗಬೇಕು ಎಂಬ ಹಂಬಲ ಆತನದ್ದಾಗಿತ್ತು. ಆದರೆ, ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ತಂದೆ-ತಾಯಿ ಶಿಕ್ಷಣ ಮುಗಿಸಿದ ಕೂಡಲೇ ಕೆಲಸ ನೋಡಿಕೊಂಡು ಮನೆಯ ಜವಾಬ್ದಾರಿ ನಿರ್ವಹಿಸು ಎಂದು ಹೇಳಬಹುದಿತ್ತು. ಆದರೆ, ಖದೀರ್ ತಂದೆ ಹುಸೇನ್‌ಸಾಬ ಮತ್ತು ತಾಯಿ ಫರೀದಾಬೇಗಂ ಈತನ ಸಾಧನೆಯ ದಾಹಕ್ಕೆ ನೀರೆರೆದು ಪೋಷಿಸಿದರು. ಇದರ ಫಲವಾಗಿ ಇಂದು ಖದೀರ್ ಒಬ್ಬ ಯಶಸ್ವಿ ಉದ್ಯಮಿಯಾಗಿ ಇಡೀ ಜಗತ್ತೆ ಇತನತ್ತ ನೋಡು ದಿನವೊಂದು ಇನ್ನೇನು ಬಹುಕಾಲ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ಈತನ ಯಶಸ್ಸಿನ ನಾಗಾಲೋಟ ಸಾಗಿದೆ.

ಪರಿಸರ ಸ್ನೇಹಿ ಉದ್ಯಮದ ಕನಸು..

ಅಬ್ದುಲ್ ಖದೀರ್ ಕೇವಲ ಉದ್ಯಮಿಯಾಗಿ ಹಣಗಳಿಸುವ ಉದ್ದೇಶ ಮಾತ್ರ ಹೊಂದಿಲ್ಲ. ಈತ ಬಾಲ್ಯದಿಂದಲೇ ಪರಿಸರ ಹಾಗೂ ಪ್ರಾಣಿ, ಪಕ್ಷಿ ಪ್ರೇಮಿ. ಬಾಲ್ಯದಲ್ಲಿಯೇ ಮನೆಯಲ್ಲಿ ಹಲವು ಬಗೆಯ ಪಕ್ಷಿಗಳನ್ನು ಸಾಕಿದಾತ. ಒಂದು ಅನಿರೀಕ್ಷಿತ ಘಟನೆಯೊಂದರಲ್ಲಿ ಪಕ್ಷಿಯೊಂದರ ಬಾಯಿಯಲ್ಲಿ ಸಿಕ್ಕುಹಾಕಿಕೊಂಡ ಪ್ಲಾಸ್ಟಿಕ್ ತುಣುಕಿನಿಂದ ಪ್ರಾಣಸಂಕಟದಿAದ ತೊಳಲಾಡುತ್ತಿದ್ದ ಪಕ್ಷಿಯನ್ನು ಗಮನಿಸಿದ ಅಬ್ದುಲ್ ಆ ಪಕ್ಷಿಯನ್ನು ಹಿಡಿದು ಆರೈಕೆ ಮಾಡಿ ಬಾಯಲ್ಲಿದ್ದ ಪ್ಲಾಸ್ಟಿಕ್ ತುಣಕನ್ನು ಹೊರಹಾಕಿದ. ಆ ಕ್ಷಣಕ್ಕೆ ಆ ಪಕ್ಷಿ ಉಳಿತು ಜೀವ ಎನ್ನುವ ಸಂತಸದಿAದ ಹಾರಿ ಹೋಯಿತು. ಆದರೆ ಅಷ್ಟೇ ಸಂತಸವನ್ನು ಅಬ್ದುಲ್ ಖದೀರ್ ಅನುಭವಿಸಿದ. ಆ ಕ್ಷಣಕ್ಕೆ ಆತ ಯೋಚಿಸಿದ್ದು, ಪ್ಲಾಸ್ಟಿಕ್ ನಂತಹ ಪರಿಸರಕ್ಕೆ ಮಾರಕವಾಗುವ ಪದಾರ್ಥಗಳಿಂದ ಎಷ್ಟೊಂದು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾಗುವ ಉದ್ಯಮವನ್ನು ಸ್ಥಾಪಿಸಬೇಕು ಎನ್ನುವ ಉತ್ಕಟ ಹಂಬಲ ಹೊಂದಿದರು. ಆಗಿನಿಂದಲೇ ಪರಿಸರ ಸ್ನೇಹಿ ಉದ್ಯಮದ ಕನಸು ಅಬ್ದುಲ್ ಖದೀರ್ ಅವರಲ್ಲಿ ಜನ್ಮ ತಾಳಿತು.

ಫ್ಲಾಟೋನಿಕ್ಸಾ ಕಂಪನಿ ಕಟ್ಟಿದ ಕಥೆ

ಇನ್ನೇನು ಎಂಜನೀಯರಿAಗ್ ಪದವಿ ಪಡೆದು ಹೊರಬಿದ್ದರೆ ಸಾಕು ಕೈತುಂಬ ಹಣ ಸಂಪಾದಿಸಬಹುದಿತ್ತು. ಆದರೆ, ಅಬ್ದುಲ್ ಖದೀರ್ ಒಬ್ಬ ಉದ್ಯಮಿಯಾಗುವದರತ್ತ ಯೋಚಿಸಿ ತನ್ನೂರಲ್ಲೆ ಏನನ್ನಾದರೂ ಉದ್ಯಮ ಆರಂಭಿಸಿ ತನ್ನೂರ ಜನರಿಗೊಂದು ನೆಮ್ಮದಿಯ ಬದುಕು ಒದಗಿಸಿಕೊಡಬೇಕು ಎನ್ನುವ ಉದ್ದೇಶದಿಂದ ಆಸಕ್ತ ಗೆಳೆಯರನ್ನು ಕಟ್ಟಿಕೊಂಡು ಗಡಿಯಾರ ತಯಾರಿಕಾ ಕಂಪನಿಯನ್ನು ಆರಂಭಿಸಿದರು. ಇದಕ್ಕೆ ಫ್ಲಾಟೋನಿಕ್ಸಾ ಹೆಸರನ್ನಿಟ್ಟು ಪರಿಸರ ಸ್ನೇಹಿಯಾಗಿ ಗಡಿಯಾರ ತಯಾರಿಕೆಯನ್ನು ಆರಂಭಿಸಿದರು. ಕಟ್ಟಿಗೆ ತುಂಡು, ಕಟ್ಟಿಗೆ ಪುಡಿ, ಕಬ್ಬಿನ ಸಿಪ್ಪೆಯಿಂದ ಬಗೆಬಗೆಯ ಗಡಿಯಾರ ತಯಾರಿಸುತ್ತಿದ್ದಾರೆ. ಇವರು ತಯಾರಿಸಿದ ಗಡಿಯಾರ ಎಷ್ಟೆ ವರ್ಷ ಬಳಸಿದರೂ ಬಳಸಿದಾದ ಮೇಲೆ ಅದನ್ನು ಬಿಸಾಕಿದರೆ, ಬಿಸಾಕಿದ ಸ್ಥಳದಲ್ಲಿಯೇ ಅದು ಕೊಳೆತು ಗೊಬ್ಬರವಾಗಿ ಅಲ್ಲಿ ಸಸಿಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಇದೊಂದು ಪಕ್ಕಾ ಪರಿಸರ ಸ್ನೇಹಿ ಉದ್ಯಮವಾಗಿದೆ. ಇದರ ಜೊತೆಗೆ ಕ್ಯಾರಿ ಬ್ಯಾಗಿ, ಮಾಸ್ಕ್, ಹೆಲ್ಮೆಟ್‌ಗಳನ್ನು ಕೂಡ ಆರೋಗ್ಯಕ್ಕೆ ಪೂರಕವಾಗಿ ತಯಾರಿದ್ದಾರೆ.

ನಾಲ್ಕು ರಿತಿಯಲ್ಲಿ ಗಡಿಯಾರದ :

ಪ್ಲಾಟೋನಿಕ್ಸಾ ಗಡಿಯಾರಗಳು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದು, ರೂಟ್, ಲೋಟಸ್, ಡಿವೈನ್ ಹಾಗೂ ಫ್ರೋಟಾನ್ ಎಂಬ ನಾಲ್ಕು ಭಾಗಗಳಲ್ಲಿ ತಯಾರಿಸಲಾಗುತ್ತದೆ. ರೂಟ್ ಗಡಿಯಾರ 100 ರಿಂದ ಆರಂಭವಾದರೆ, ಲೋಟಸ್ 180 ರೂ., ಡಿವೈನ್ 280 ರೂ., ಫ್ರೋಟಾನ 480 ರೂ. ನಿಂದ ನಿಗದಿ ಮಾಡಲಾಗಿದೆ. ಇದರಿಂದ ಜನರು ತಮಗೆ ಕೈಗೆಟಕುವ ದರದಲ್ಲಿ ಗಡಿಯಾರ ಕೊಂಡುಕೊಳ್ಳಲು ಅನಕೂಲವಾಗಿದೆ.

ಬ್ಯಾಂಕ್ ಸೇರಿದಂತೆ ದೊಡ್ಡ ಕಂಪನಿಗಳು ಬುಕ್ಕಿಂಗ್ :

ಪ್ಲಾಟೊನೆಕ್ಸಾ ಕಂಪನಿ ಕಡಿಮೆ ಕರ್ಚಿನಲ್ಲಿ ಉತ್ತಮ ಗಡಿಯಾರಗಳನ್ನು ಜನರಿಗೆ ತಲುಪಿಸುತ್ತಿದ್ದು, ಬ್ಯಾಂಕ್ ಸೇರಿದಂತೆಹಾಳಾದರೆ ಹಾಗೂ ಹೊರ ರಾಜ್ಯದ ಕಂಪನಿಗಳು ಗಡಿಯಾರ ತಯಾರಿಕೆಗೆ ಆರ್ಡರ್ ನೀಡುತ್ತಿದ್ದಾರೆ. ಇನ್ನು ಮದುವೆ, ಹಬ್ಬಹರಿದಿನ, ಹುಟ್ಟು ಹಬ್ಬಗಳಲ್ಲಿ ಹಣ ಖರ್ಚು ನಾಡಿ ಪರಿಸರಕ್ಕೆ ಮಾರಕವಾದ ಕಾಣಿಕೆ ನೀಡುವ ಬದಲು ಇಂಥ ಪರಿಸರ ಸ್ನೇಹಿ ಕಾಣಿಕೆ ನೀಡಿದರೆ ಪರಿಸರಕ್ಕೂ ಉಪಯೋಗ. ಜೊತೆಗೆ ಇಂಥ ಉದ್ದಿಮೆ ಬೆಳವಣಿಗೆಗೂ ಅನುಕೂಲ.

ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿ ಕಂಪನಿಯನ್ನು ಉನ್ನತ ಮಟ್ಟಕ್ಕೆ ಒಯ್ಯುವ ಕೆಲಸ ಮಾಡುತ್ತಿದ್ದಾನೆ. ಕಡಿಮೆ ಹಣದಲ್ಲಿ ನನ್ನ ಮಗ ಜನರಿಗೆ ಒಳ್ಳೆಯ ಉತ್ಪನ್ನಗಳು ನೀಡುವ ಕೆಲಸ ಮಾಡುತ್ತಿದ್ದಾನೆ. ಇದರಿಂದ ನನ್ನ ಮಗ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ಇನ್ನು ಈ ಕಂಪನಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ. ಮಗನಿಗೆ ನಾನು ಮತ್ತು ನನ್ನ ಗಂಡ ಬೆನ್ನೆಲುಬಾಗಿ ನಿಂತು ಸ್ಪೂರ್ತಿ ನಿಡುತ್ತಿದ್ದೇವೆ. ಫರಿಧಾಬೇಗಂ ಶಿರಹಟ್ಟಿ, ತಾಯಿ


ಲಕ್ಷದಿಂದ ಕೋಟಿಗೆ ಬಾಳಿದ ಕಂಪನಿ

ಸ್ನೇಹಿತರೊಂದಿಗೆ 2.50 ಲಕ್ಷ ರೂ. ಹಣದಲ್ಲಿ ಅಬ್ದುಲ್ ಖದೀರ್ ಪ್ಲಾಟೋನಿಕ್ಸ ಕಂಪನಿ ಆರಂಭಿಸಿ, ಹಗಲು-ರಾತ್ರಿ ಅದಕ್ಕಾಗಿಯೇ ಮೀಸಲಿಟ್ಟು, ವಿವಿಧ ರೀತಿಯ ವಿನ್ಯಾಸಗಳಲ್ಲಿ ಗಡಿಯಾರಗಳನ್ನು ತಯಾರಿಸಿ, ಕಡಿಮೆ ಹಣದಲ್ಲಿ ಜನರಿಗೆ ತಲುಪಿಸುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಈಗ ಪ್ಲಾಟೋನಿಕ್ಸಾ ಕಂಪನಿ 1.5 ಕೋಟಿ ರೂ. ಗಳಿಸುವ ಮೂಲಕ ಕೋಟಿಯಲ್ಲಿ ಬೆಲೆ ಬಾಳುವಂತೆ ಮಾಡಿದ್ದಾರೆ.

ನನ್ನ ಮಗ ಇಂತಹ ದೊಡ್ಡ ಮಟ್ಟದ ಕಂಪನಿ ತೆಗೆಯುತ್ತಾನೆ ಎಂದು ನಾನು ಮೊದಲಿಗೆ ನಂಬಿರಲಿಲ್ಲ. ಆದರೆ, ನಾವು ಅಂದುಕೊAಡಿದ್ದಕ್ಕಿAತ ದೊಡ್ಡಮಟ್ಟದಲ್ಲೇ ಕಂಪನಿಯನ್ನು ಬೆಳೆಸುತ್ತಿದ್ದಾನೆ. -ಹುಸೇನ್‌ಶಾಬ ಶಿರಹಟ್ಟಿ , ತಂದೆ

ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯ

ಬೇರೆ ಕಂಪನಿಯ ಗಡಿಯಾರದಲ್ಲಿ ಅವರು ಮಾಡಿದ ವಿನ್ಯಾಸದಲ್ಲೇ ಗ್ರಾಹಕರಿಗೆ ಗಡಿಯಾಗಳು ಸಿಗುತ್ತವೆ. ಆದರೆ, ಇಲ್ಲಿ ಪ್ಲಾಟೋನಿಕ್ಸಾ ಕಂಪನಿಯಲ್ಲಿ ಗ್ರಾಹಕರ ಕಲ್ಪನೆಗೆ ಮತ್ತು ಅವರಿಗೆ ಬೇಕಾದ ವಿನ್ಯಾಸಲ್ಲಿ ಗಡಿಯಾರವನ್ನು ಕಡಿಮೆ ಹಣದಲ್ಲಿ ತಾಯಾರಿಸಿ ಕೊಡುವ ವ್ಯವಸ್ಥೆಯೂ ಮಾಡಲಾಗಿದೆ.

ಈ ಪ್ಲಾಟೊನಿಕ್ಸಾ ಗಡಿಯಾರ ಕಂಪನಿಯಲ್ಲಿ ಗಡಿಯಾರದ ಜೊತೆಗೆ ಕೊರೊನಾದಂತಹ ಈ ಸಂದರ್ಭದಲ್ಲಿ ಜನರಿಗೆ ಉಪಯುಕ್ತವಾಗುವಂತಹ ಎಲೆಕ್ಟ್ರಿಕಲ್ ಮಾಸ್ಕ್, ಹಾಗೂ ಜಿಪಿಎಸ್ ಹೆಲ್ಮೆಟ್ ಹಾಗೂ ಮುಂತಾದ ಉತ್ಪನ್ನಗಳು ಈ ಕಂಪನಿಯಲ್ಲಿ ಸಿದ್ದಗೊಳ್ಳುತ್ತಿವೆ. ಈ ಕಂಪನಿ ಮುಂದಿನ ದಿನಗಳಲ್ಲಿ ಬಹುದೊಡ್ಡ ಕಂಪನಿಯಾಗಿ ಹೊರಹೊಮ್ಮಲಿದೆ. ಜಂದಿಸಾಬ್, ಗೆಳೆಯ

ಗಡಿಯಾರದೊಂದಿಗೆ ವಿವಿಧ ಉತ್ಪನ ತಯಾರಿಕೆ

ಪ್ಲಾಟೋನಿಕ್ಸಾ ಗಡಿಯಾರ ಕಂಪನಿಯಲ್ಲಿ ಗಡಿಯಾರಗಳಷ್ಟೇ ಅಲ್ಲದೇ ಮುಖಕ್ಕೆ ಬಳಸುವ ಎಲೆಕ್ಟ್ರಿಕಲ್ ಮಾಸ್ಕ, ಅಪಘಾತವಾದಾಗ ಸಮಿಪದ ಪೊಲೀಸ್ ಠಾಣೆಗೆ ಮತ್ತು ಕುಟುಂಬಕ್ಕೆ ಮಾಹಿತಿ ತಿಳಿಸುವಂತಹ ಹೆಲ್ಮೇಟ್ ತಯಾರಿಕೆ ಸೇರಿದಂತೆ ವಿವಿಧ ಉತ್ಪನ್ನಗಳು ತಯಾರಿಸಲು ಮುಂದಾಗಿದ್ದು, ಜನರಿಗೆ ಕಡಿಮೆ ಹಣದಲ್ಲಿ ಹೊಸ ರೀತಿಯ ಉತ್ಪನ್ನಗಳು ದೊರಕುವ ಕೆಲಸ ಮಾಡುತ್ತಿದ್ದಾರೆ.

ಬಂಡವಾಳ ಹೂಡಿಕೆದಾರರ ಅವಶ್ಯಕತೆ

ಇಂಥ ಅದ್ಭುತ ಕನಸುಗಾರ ಅಬ್ದುಲ್ ಖದೀರ್ ಗೆ ಬಂಡವಾಳ ಹೂಡಿಕೆಗಾರರ ಅವಶ್ಯಕತೆ ಇದೆ. ಒಂದು ವೇಳೆ ಬಂಡವಾಳ ಹೂಡಿಕೆದಾರರು ಸಿಕ್ಕರೆ ಈ ಕಂಪನಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲ. ಜೊತೆಗೆ ಇಂಥ ಸಾಕಷ್ಟು ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಬಲ್ಲೆ. ಜೊತೆಗೆ ಕಂಪನಿಯನ್ನು ಲಾಭದತ್ತ ಕೊಂಡೊಯ್ಯಬಲ್ಲೆ ಎನ್ನುವ ವಿಶ್ವಾಸ ಅಬ್ದುಲ್ ಅವರದ್ದಾಗಿದೆ.

ಹಾಳಾದರೂ ಗಡಿಯಾರ ಉಪಯುಕ್ತ

ಗಡಿಯಾರ ಹಾಳಾದರೆ ಅದು ಮರಳಿ ಉಪಯುಕ್ತವಾಗಬೇಕು ಎನ್ನುವ ದೃಷ್ಠಿಯಿಂದ ಗಡಿಯಾರ ತಯಾರಿಸುವುದಕ್ಕೆ ಬಳಸಿದ ರಟ್ಟಿನಲ್ಲಿ ವಿವಿಧ ರೀತಿಯ ಗಿಡ ಹಾಗೂ ಹೂವಿನ ಬೀಜಗಳು ಬಳಸಲಾಗಿದೆ. ಇದರಲ್ಲಿ ಗ್ರೆಸ್ ಜಾತಿಯ ಹುಲ್ಲು, ಇಂಡೆಕೊರ ಗಿಡದ ಬೀಜ, ಫ್ಲಾವರ್ ಪ್ಲಾಂಟ್ಸ್ ಬೀಜಗಳನ್ನು ಬಳಸಲಾಗಿದೆ. ಇದರಿಂದ, ಜನರು ಈ ಗಡಿಯಾರವನ್ನು ಕೊಂಡೋಯ್ದ ಮೇಲೆ ಅದು ಹಲವು ವರ್ಷ ಕಳೆದಂತೆ ಹಾಳಾದರೆ, ಅದನ್ನು ಹೊರಗೆ ಎಸೆದಾಗ ಅದರಿಂದ ಹೂವಿನ ಗಿಡಗಳು ಬೆಳೆಯುವಂತೆ ಯೋಜನೆಯನ್ನು ಇಲ್ಲಿ ಬಳಸಲಾಗಿದೆ. ಈ ಗಡಿಯಾರ ಹಾಳಾದರೂ ಮರಳಿ ಉಪಯುಕ್ತವಾಗುವ ನಿಟ್ಟಿನಲ್ಲಿ ತಯಾರಿಸಲಾಗಿದೆ.

Exit mobile version