ರಾಜ್ಯ ಹೆದ್ದಾರಿಗಳಲ್ಲೆ ತಗ್ಗು ದಿನ್ನೆಗಳ ಸಾಮ್ರಾಜ್ಯ

ಫಿರೋಜ ಮೋಮಿನ್
ಗಜೇಂದ್ರಗಡ: ಪಟ್ಟಣದಿಂದ ಗದಗ, ಇಲಕಲ್ ಮತ್ತು ರೋಣ ಮಾರ್ಗಗಳಿಗೆ ಸಂಪರ್ಕಿಸುವ ಮೂರು ರಾಜ್ಯ ಹೆದ್ದಾರಿಗಳು ತೆಗ್ಗು ದಿನ್ನೆಗಳ ಸಾಮ್ರಾಜ್ಯವಾಗಿದೆ. ಹಲವು ವರ್ಷಗಳಿಂದ ಈ ಮೂರು ರಸ್ತೆಗಳಿಗೆ ದುರಸ್ಥಿ ಭಾಗ್ಯ ದೊರೆಯದ ಪರಿಣಾಮ ಗಜೇಂದ್ರಗಡ ಶಾಪ ಪಟ್ಟಣ ಗ್ರಸ್ತವಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತೀವೃಗತಿಯಲ್ಲಿ ಬೆಳೆಯುತ್ತಿರುವ ದೊಡ್ಡ ಪಟ್ಟಣವಾಗಿರುವ ಗಜೇಂದ್ರಗಡ ತಾಲೂಕಾ ಕೇಂದ್ರಕ್ಕೆ ಹೋಗಲು ಬಹುತೇಕರು ರಸ್ತೆಗಳ ದುಸ್ಥಿತಿ ಕಂಡು ಹಿಂದೆ ಸರಿಯುವ ಸ್ಥಿತಿ ಎದುರಾಗಿದೆ. ಇಲ್ಲಿನ ರಸ್ತೆಗಳು ನರಕಯಾತನೆಯ ಪ್ರತಿಬಿಂಬದಂತಿವೆ. ಹೀಗಾಗಿ ಬಹುತೇಕರು ಗಜೇಂದ್ರಗಡಕ್ಕೆ ಆಗಮಿಸುವವರು ಹಿಡಿಶಾಪ ಹಾಕುವ ಸ್ಥಿತಿ ಎದುರಾಗಿದೆ.

ನೆರೆಯ ಕೊಪ್ಪಳ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ನೂರಾರು ಗ್ರಾಮಗಳ ಜನತೆಯ ವ್ಯಾಪಾರ ವಹಿವಾಟು ಕೇಂದ್ರವಾಗಿರುವ ಗಜೇಂದ್ರಗಡಕ್ಕೆ ಆಗಮಿಸುವವರು. ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿಶಾಪ ತಪ್ಪಿದ್ದಲ್ಲ. ತಗ್ಗು, ದಿನ್ನೆಗಳ ಮಧ್ಯೆ ಸಿಲುಕಿರುವ ರಾಜ್ಯ ಹೆದ್ದಾರಿ, ವಾಹನಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಹಲವಾರು ವರ್ಷಗಳಿಂದ ಈ ಮೂರು ರಸ್ತೆಗಳಿಗೆ ಮುಕ್ತಿಯೇ ದೊರೆಯದಂತಾಗಿದೆ.

ಶಾಪಗ್ರಸ್ತ ಗಜೇಂದ್ರಗಡ
ಹಲವಾರು ವರ್ಷಗಳಿಂದ ಗದಗ-ಇಲಕಲ್ ಮತ್ತು ರೋಣ ರಸ್ತೆಗಳಿಗೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಯಾವೊಬ್ಬ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಕೇವಲ ಮೂಗಿಗೆ ತುಪ್ಪ ಸವರುವಂತೆ, ರಸ್ತೆಗೆ ತೇಪೆ ಹಚ್ಚುವುದನ್ನು ಬಿಟ್ಟರೇ, ಈವರೆಗೂ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಯಾರ ಶಾಪವೋ ಏನೋ. ಈ ರಸ್ತೆಗಳಿಗೆ ಡಾಂಬರೀಕರಣ ಭಾಗ್ಯ ಮಾತ್ರ ದೊರೆಯದ ಪರಿಣಾಮ ಗಜೇಂದ್ರಗಡ ಎಲ್ಲರ ಹಿಡಿಶಾಪಕ್ಕೆ ಒಳಗಾಗುವುದಲ್ಲದೇ, ಶಾಪಗ್ರಸ್ತವಾಗಿದೆ.

ಅರ್ಧಕ್ಕೆ ನಿಂತ ಕಾಮಗಾರಿ :
ಮಸಣಕ್ಕೆ ದಾರಿಯಂತಾಗಿದ್ದು, ರಸ್ತೆಗಳನ್ನು ದುರಸ್ಥಿ ಮಾಡಿ ಎಂದು ಹಲವಾರು ಬಾರಿ ವರದಿ ಪ್ರಕಟಿಸುವುದಲ್ಲದೇ, ವಿವಿಧ ಕನ್ನಡ ಪರ ಸಂಘಟನೆಗಳೂ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದರಿಂದ ಎಚ್ಚೇತ್ತ ಅಧಿಕಾರಿಗಳು ವಾರದೊಳಗೆ ರಸ್ತೆ ದುರಸ್ಥಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ತಿಂಗಳ ಬಳಿಕ ಕಾಮಗಾರಿ ಕೈಗೆತ್ತಿಕೊಂಡು, ಇದೀಗ ರಸ್ತೆ ಕಾಮಗಾರಿ ಎರಡು ತಿಂಗಳಿಂದ ಅರ್ಧಕ್ಕೆ ನಿಂತಿದೆ. ಇದು ಆಡಳಿತದ ಬೇಜವಾಬ್ದಾರಿಕೆಗೆ ಸಾಕ್ಷಿಯಾಗಿದೆ.

ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಪ್ರಶ್ನೆ :
ಬೇರೆ ಜಿಲ್ಲೆಗಳಿಂದ ಗಜೇಂದ್ರಗಡಕ್ಕೆ ಆಗಮಿಸುವ ಪ್ರಯಾಣಿಕರು ಈ ಭಾಗದಲ್ಲಿನ ರಸ್ತೆಗಳ ದುಸ್ಥಿತಿ ಕಂಡು, ಇಲ್ಲಿ ಹೇಳೋರು, ಕೇಳೋರು ಇಲ್ವೇನು, ಇಂಥ ರಸ್ತೆಲಿ ಹ್ಯಾಂಗ್ ತಿರಗಾಡಬೇಕು, ಶಾಸಕರು, ಅಧಿಕಾರಿಗಳ ಕಣ್ಣಿಗೆ ಕಾಣಿಸಲ್ವಾ? ಎಂಬುದು ಬೇರೆ ಜಿಲ್ಲೆಯ ಪ್ರಯಾಣಿಕರ ಕ್ಷೇತ್ರದಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಾರ್ಯ ವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ.

ನಿಡಗುಂದಿಯಿಂದ ಗಜೇಂದ್ರಗಡದ ವರೆಗೆ ಬರುವಷ್ಟರಲ್ಲಿ, ಹೈರಾಣಾದೆ. ಗಜೇಂದ್ರಗಡದಲ್ಲಿ ನಮ್ಮ ಸಂಬಂಧಿಕರ ಮನೆಗೆ ಬಂದಿದ್ದೆ. ಇಂಥ ರಸ್ತೆ ನೋಡಿ, ಇನ್ನೊಮ್ಮೆ ಗಜೇಂದ್ರಗಡಕ್ಕೆ ಬರೋ ದುಸ್ಸಾಹ ಮಾತ್ರ ಮಾಡಬಾರದಪ್ಪ ಅನ್ನೋ ಕೆಟ್ಟ ಅನುಭವ ಈ ರಸ್ತೆಯಿಂದಾಯಿತು. ಹರೀಶ ಮೆಹತಾ, ಪ್ರಯಾಣಿಕ

ಕೆಳೋರಿಲ್ಲ ರಸ್ತೆಯ ಆರ್ಥನಾದ :
ರಸ್ತೆ ದುರಸ್ಥಿಗೊಂಡು ವರ್ಷಗತಿಸುತ್ತಾ ಬಂದರೂ ಸಹ ರಸ್ತೆಯ ತುಂಬೆಲ್ಲಾ ತಲೆ ಎತ್ತಿರುವ ಗುಂಡಿಗಳು, ಜೊತೆಗೆ ಅರ್ಧ ಕಾಮಗಾರಿಯಿಂದ ತಲೆ ಎತ್ತಿರುವ ಜಲ್ಲಿಕಲ್ಲುಗಳು ಸಂಚರಿಸುವ ವಾಹನ ಸವಾರರನ್ನು ಬೀಳುವಂತೆ ಮಾಡುತ್ತಿವೆ. ಎಷ್ಟೋ ಬೈಕ್ ಸವಾರರು ತೆಗ್ಗು ದಿನ್ನೆಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಘಟನೆಗಳು ನಡೆದಿದೆ. ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದರೂ ಯಾರೂ ಕೇಳುವರಿಲ್ಲದಂತಾಗಿದೆ.


Exit mobile version