ನಾಳೆ ರಾಜ್ಯ ಬಂದ್ ಏನಿರುತ್ತೆ..? ಏನಿರಲ್ಲ..?

ಮಾರಾಟ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಕೆಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇರುತ್ತದೆ. ಇದರೊಂದಿಗೆ ಖಾಸಗಿ ಬಸ್, ಪ್ರಯಾಣಿಕರ ವಾಹನಗಳು, ಸರ್ಕಾರಿ ಕಚೇರಿ, ಮೆಟ್ರೋ ಸೇವೆ, ಆಸ್ಪತ್ರೆ ಮೆಡಿಕಲ್ ಸ್ಟೋರ್, ಅಂಬುಲೆನ್ಸ್, ರೈಲು ಸಂಚಾರ, ಹೋಟೆಲ್, ಹಣ್ಣು ತರಕಾರಿ ವ್ಯಾಪಾರ ಮೊದಲಾದವು ಇರುತ್ತವೆ.

ಆದರಹಳ್ಳಿಗೆ ಹಾದಿ ಯಾವುದು..? ದೇವಿಹಾಳಕ್ಕೆ ಹೋಗುವ ದಾರಿ ಎಲ್ಲಿ?

ರಸ್ತೆಗಳು ನಿರ್ಮಾಣ ಮಾಡಿದ ಮೇಲೆ ನಿರ್ಮಿಸಿದ ರಸ್ತೆಗಳ ಮೇಲೆ ಇಷ್ಟೆ ಸಾಮಾರ್ಥ್ಯದ ವಾಹನಗಳು ಓಡಾಡಬೇಕು ಎನ್ನುವ ನಿಯಮವಿದೆ. ಆದರೆ ಅದ್ಯಾವ ನಿಉಮವನ್ನು ಪಾಲಿಸದೇ ಇರುವ ಕಾರಣಕ್ಕೆ ರಸ್ತೆಯೊಂದು ಹಳ್ಳ ಹಿಡಿದಿದೆ.

ಅಡುಗೆ ಅನಿಲದ ಬೆಲೆ ಏರಿಕೆ, ಬಡವರ ಮೇಲೆ ಕೇಂದ್ರದ ಗಧಾಪ್ರಹಾರ: ಎಂ.ಎಸ್.ಹಡಪದ ಆಕ್ರೋಶ

ದಿನದಿಂದ ದಿನಕ್ಕೆ ಅಡುಗೆ ಅನಿಲ ಬೆಲೆ ಏಕಾಏಕಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗ್ರಾಹಕರನ್ನು ತತ್ತರಿಸುವಂತೆ ಮಾಡುತ್ತಿದೆ. ಕೇಂದ್ರದ ಆಡಳಿತ ಬಡವರ ಮೇಲಿನ ಗಧಾಪ್ರಹಾರದ ಆಡಳಿತವಾಗಿದೆ ಎಂದು ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಯಂತ್ರಣ ತಪ್ಪಿ ಕಾರು ಪಲ್ಟಿ: ಮಹಿಳೆ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು ಗ್ರಾಮದ ಹೊರ ವಲಯದಲ್ಲಿ ನಡೆದಿದೆ.