ಕಾಲುವೆಗೆ ಉರುಳಿ ಬಿದ್ದ ಕಾರು: ಇಬ್ಬರು ಸ್ಥಳದಲ್ಲೆ ಸಾವು

haveri election counting

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ನಡೆದಿದೆ. ಪ್ರಕಾಶ ಬನ್ನಿಮಟ್ಟಿ (40) ಮತ್ತು ಸಿದ್ದನಗೌಡ ಬಿಷ್ಟನಗೌಡರ (45) ಮೃತರು. ಮೃತರು ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿಗಳು. ಗ್ರಾಮ ಪಂಚಾಯತಿ ಮತ ಎಣಿಕೆ ಹಿನ್ನೆಲೆಯಲ್ಲಿ ಹಾವೇರಿಗೆ ಬರುತ್ತಿದ್ದ ಇಬ್ಬರು. ಇದರಲ್ಲಿ ಪ್ರಕಾಶ್, ಅಭ್ಯರ್ಥಿಯ ಪರವಾಗಿ ಮತ ಎಣಿಕೆಯ ಏಜೆಂಟ್ ಆಗಿದ್ದರು. ನಿಯಂತ್ರಣ ತಪ್ಪಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಕಾರ್ ಉರುಳಿ ಬಿದ್ದಿದ್ದರಿಂದ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version