ಇನ್ಮುಂದೆ ಕನ್ನಡದಲ್ಲೂ ಇಂಜನೀಯರಿಂಗ್ ಕಲಿಬಹುದಂತೆ!

students enjaneers karnataka

ಅದೆಷ್ಟೋ ವಿದ್ಯಾರ್ಥಿಗಳಿಗೆ ನಾನು ಡಾಕ್ಟರ್ ಆಗಬೇಕು. ಇಂಜನೀಯರ್ ಆಗಬೇಕು ಎನ್ನುವ ಕನಸಿರುತ್ತೆ. ಆದರೆ ಅದರಲ್ಲಿನ ಇಂಗ್ಲೀಷ ಜ್ಞಾನದ ಕೊರತೆಯಿಂದ ಜನೀಯರಿಂಗ್ ಕಲಿಯಲು ಹಿಂದೇಟು ಹಾಕುವವರೇ ಬಹಳಷ್ಟು ಜನರಿದ್ದರು.

ನವದೆಹಲಿ: ಅದೆಷ್ಟೋ ವಿದ್ಯಾರ್ಥಿಗಳಿಗೆ ನಾನು ಡಾಕ್ಟರ್ ಆಗಬೇಕು. ಇಂಜನೀಯರ್ ಆಗಬೇಕು ಎನ್ನುವ ಕನಸಿರುತ್ತೆ. ಆದರೆ ಅದರಲ್ಲಿನ ಇಂಗ್ಲೀಷ ಜ್ಞಾನದ ಕೊರತೆಯಿಂದ ಜನೀಯರಿಂಗ್ ಕಲಿಯಲು ಹಿಂದೇಟು ಹಾಕುವವರೇ ಬಹಳಷ್ಟು ಜನರಿದ್ದರು. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತಿತ್ತು. ಆದರೆ ಇದೀಗ ಇದೊಕ್ಕೊಂದು ಪರಿಹಾರ ಸಿಕ್ಕಿದೆ. ಮಾತೃಭಾಷೆಯಲ್ಲಿಯೂ ಇಂಜನೀಯರಿಂಗ್ ಮಾಡಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಹೌದು, ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್ಐಟಿ) ಗಳಲ್ಲಿ ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ನೀಡಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮುಂದಿನ ವರ್ಷದಿಂದ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಮಾತೃಭಾಷೆಯಲ್ಲಿ ನೀಡಲಾಗುವುದು ಎಂದು ತಿಳಿದು ಬಂದಿದೆ.

ಕೇಂದ್ರ ಶಿಕ್ಷಣ ಸಚಿವ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಸರ್ಕಾರದ ವಿವಿಧ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಮತ್ತು ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಬದಲಾವಣೆ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಇದರಿಂದ ಇಂಜನೀಯರಿಂಗ್ ಕಲಿಕೆಯ ಬಗ್ಗೆ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಾರೆ ಎಂದು ಹೇಳಲಾಗುತ್ತಿದೆ.

Exit mobile version