ಪಕ್ಷದ ಸಿದ್ಧಾಂತ, ತತ್ವಗಳನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು: ಸಂಕನೂರ್

bjp gadag sankanoor

ಪಕ್ಷದ ಸಿದ್ಧಾಂತ, ತತ್ವಗಳನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು: ಸಂಕನೂರ್

ಗದಗ: ಭಿನ್ನತೆ ಹಾಗೂ ವೈಶಿಷ್ಟ್ಯತೆಯಿಂದ ಕೂಡಿರುವ ಪಕ್ಷ ಬಿಜೆಪಿಯಾಗಿದೆ. ಪಕ್ಷದ ಸಿದ್ಧಾಂತ, ತತ್ವಗಳನ್ನು  ಕಾರ್ಯಕರ್ತರಿಗೆ ತಿಳಿಸಿ ಅವರಲ್ಲಿ ನಾಯಕತ್ವದ ಗುಣ ಬೆಳೆಸುವುದು  ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ್ ಹೇಳಿದರು.

ಅವರು ಸೋಮವಾರ ನಗರದ  ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಭಾರತಿಯ ಜನತಾ ಪಕ್ಷದ ಶಹರ ಮಂಡಳದ ವತಿಯಿಂದ  ಪ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.

ಜನಸಂಘ 1951  ರಲ್ಲಿ  ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಪ್ರಾರಂಭವಾಯಿತು. ಕಾರ್ಯಕರ್ತರಿಗೆ  ನಾಯಕತ್ವದ ಗುಣ ಬೆಳೆಸುವುದಕ್ಕೆ ಪಕ್ಷ 1957 ಅಗಸ್ಟ್  8 ರಂದು ಪ್ರಶಿಕ್ಷಣ ವರ್ಗ ಪ್ರಾರಂಭಿದೆ‌ ಎಂದರು. ನರೇಂದ್ರ ಮೋದಿ ಅವರು ಕಾರ್ಯಕರ್ತರಾಗಿ ರಾಜಕೀಯ ಜೀವನ ಅರಂಭಿಸಿ ಇಂದು ಭಾರತದ ಪ್ರಧಾನ ಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಅವರು ಈಗ ವಿಶ್ವದ ನಾಯಕ ಇದಕ್ಕೆ ಬಿಜೆಪಿ ಸತತ ಪ್ರೋತ್ಸಾವಿದೆ‌ ಎಂದರು.

ನೀವೂ ಸಹ  ಮುಂದೆ  ಅಂತಹ ನಾಯಕರಾಗಬೇಕು‌. ಈ ವೇದಿಕೆಯಲ್ಲಿ ಆಸಿಸನರಾಗಬೇಕು ಅದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮೂರು ಜನ ಇದ್ದ ಜನ ಸಂಘ ಇಂದು 3೦3 ಲೋಕ ಸಭಾ ಸದಸ್ಯರನ್ನು ಗೆಲ್ಲಿಸುವ ಸಾಮರ್ಥ್ಯ  ಹೊಂದಿದೆ ಎಂದರೆ ಅದಕ್ಕೆ ಪಕ್ಷದ ನಿಲುವುಗಳು, ಜನರು ಪಕ್ಷದ ಮೇಲೆ ಹಾಗೂ ನಾಯಕರ ಮೇಲೆ ಇಟ್ಟಿರುವ   ವಿಶ್ವಾಸವೇ ಇದಕ್ಕೆ ಕಾರಣ ಎಂದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ  ಸರ್ಕಾರದ ಸೇವೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಇರುವುದು ದೇಶದ ಅಭಿವೃದ್ಧಿಗಾಗಿ, ಹಿತಕ್ಕಾಗಿ ರಾಷ್ಟ್ರದಲ್ಲಿ  ಸು-ಶಾಸನ,  ಸ್ವ-ರಾಜ್ಯದ ಪಾರದರ್ಶಕ ಆಡಳಿತ ನಿರ್ಮಾಣವೇ ನಮ್ಮ ಗುರಿ ಎಂದರು.

ಎಸ್.ಸಿ ಮೋರ್ಚಾ ಅಧ್ಯಕ್ಷ ನಾರಾಯಣ ಸ್ವಾಮಿ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಪ್ರವರ್ಗ  ಜಿಲ್ಲಾ ಸಂಚಾಲಕ ಎಸ್.ಜಿ.ಉಡಪಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಪ್ರವರ್ಗ ಸಹ ಸಂಚಾಲಕ ಆನಂದ್ ಶೇಠ್, ಅರವಿಂದ ಕೆಲೂರು ಉಪಸ್ಥಿತರಿದ್ದರು. ಅನೀಲ ಅಬ್ಬಿಗೇರಿ ನಿರೂಪಿಸಿ, ಮಾಂತೇಶ ನಾಲ್ಗೊಡ ಸ್ವಾಗತಿಸಿ, ರಾಘವೇಂದ್ರ ಯಳವತ್ತಿ ವಂದಿಸಿದರು.

Exit mobile version