ಗದಗ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡಪರ ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಸೋಂಪೂರ ಮಾತನಾಡಿ, ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ಶಾಸಕ ಯತ್ನಾಳ್ ಕನ್ನಡಿಗರನ್ನು ಅವಮಾನಿಸಿದ್ದಾರೆ. ಸ್ವತ ಮುಖ್ಯಮಂತ್ರಿಗಳನ್ನು ಬ್ಲ್ಯಾಕ್ ಮೇಲೆ ಮಾಡುವ ರೀತಿಯಲ್ಲೂ ಮಾತನಾಡುತ್ತಾರೆ. ಹೀಗಾಗಿ ಇಂತಹ ಶಾಸಕರಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು. ಹೀಗಾಗಿ ಯತ್ನಾಳ್ ಅವರಂಥ ಕನ್ನಡ ವಿರೋಧಿ ಶಾಸಕ ಈ ರೀತಿ ಮಾತನಾಡಿದರೆ ವಿಧಾನಸೌಧಕ್ಕೂ ಕಾಲಿಡುವುದು ಕಷ್ಟಕರವಾಗುತ್ತದೆ. ಇದೀಗ ಕರವೇ ಸಾಂಕೇತಿಕ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡುತ್ತಿದೆ. ಕೂಡಲೇ ಶಾಸಕ ಸ್ಥಾನಕ್ಕೆ ಯತ್ನಾಳ್ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ ಮಾತನಾಡಿ, ನೆಲ ಜಲಕ್ಕಾಗಿ ಕರವೇ ನಿರಂತರ ಹೋರಾಟ ಮಾಡುತ್ತಲೇ ಇದೆ. ಒಂದು ವೇಳೆ ಕರವೇ ಕನ್ನಡಕ್ಕಾಗಿ ನಿರಂತರವಾಗಿ ಹೋರಾಟ ಮಾಡದೇ ಇದ್ದಿದ್ದರೇ ಇಷ್ಟೊತ್ತಿಗಾಗಲೇ ಬೆಳಗಾವಿ ಸ್ಥಳೀಯ ಸಂಸ್ಥೆ ಮರಾಠಿಗರ ಪಾಲಾಗುತ್ತಿತ್ತು. ಈ  ಬಗ್ಗೆ ಶಾಸಕ ಯತ್ನಾಳ್ ಯೋಚಿಸಿ ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ಶಾಸಕ ಯತ್ನಾಳ ಭೂತ ದಹನಕ್ಕೆ ಮುಂದಾದರು. ಆದರೆ ಇದಕ್ಕೆ ಪೊಲೀಸರು ಅಡ್ಡಿಪಡಿಸಿದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಇದರಿಂದ ಪೊಲೀಸ್ ಅಧಿಕಾರಿಗಳು ಹಾಗೂ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಕೈಗೊಂಬೆಯಂತೆ ಪೊಲೀಸರ ವರ್ತನೆ ಮಾಡುತ್ತಿದ್ದಾರೆ ಅಂತ ಕಿಡಿಕಾರಿದರು. ಸರ್ಕಾರ ಕನ್ನಡ ವಿರೋಧಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ರಾಜಿನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಉಪಾಧ್ಯಕ್ಷ ಶರಣಪ್ಪ ಪುರ್ತಗೇರಿ, ಯುವ ಘಟಕದ ಅಧ್ಯಕ್ಷ ನಿಂಗನಗೌಡ ಮಾಲೀಪಾಟೀಲ್, ನೀಲನಗೌಡ ಪಾಟೀಲ್, ಬಸವರಾಜ್ ಮೇಟಿ, ಬಸವರಾಜ ಹೊಗೆಸೊಪ್ಪಿನ್, ನಿಂಗಪ್ಪ ಹೊನ್ನಾಪೂರ, ವೀರುಪಾಕ್ಷಿ ಹಿತ್ತಲಮನಿ, ಹನಮಂತ ಪೂಜಾರ, ಲಖನಸಿಂಗ್ ಗಂಗಾವತಿ, ಆಶು ಜೂಲಗುಡ್ಡ, ಮಹದೇವಿ ದೊಡ್ಡಗೌಡ್ರ, ನಾಗಪ್ಪ ಅಣ್ಣಿಗೇರಿ, ಪ್ರಕಾಶ್ ಸಂದೀಗವಾಡ, ಅಜೀಂ ಖಾಜಿ, ನಿಂಗರೆಡ್ಡಿ ಬಸವರೆಡ್ಡೇರ, ಯಲ್ಲಪ್ಪ ಭೋವಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಇಂಡೋ-ನೇಪಾಳ ಕ್ರಿಕೆಟ್ ಟ್ರೋಫಿ “ನಿಡಗುಂದಿ ತಂಡಕ್ಕೆ ಚಿನ್ನದ ಪದಕ”

ಉತ್ತರಪ್ರಭ ಸುದ್ದಿ ನಿಡಗುಂದಿ: ನೇಪಾಳದ ಪೊಖರಾದಲ್ಲಿ ನಡೆದ ಇಂಡೋ-ನೇಪಾಳ ಇಂಟರ್ ನ್ಯಾಷನಲ್ ಕ್ರಿಕೆಟ್ ಚಾಂಪಿಯನ್ ಶಿಪ್…

15 ದಿನದಲ್ಲಿ ಬಾಕಿ ತೆರಿಗೆ ವಸೂಲಿ ಮಾಡಿ : ನಗರಸಭೆಗೆ ಡಿಸಿ ಸೂಚನೆ

ಗದಗ ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶಬಾಬು ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವಳಿ ನಗರದ ಎಲ್ಲ ಮುಖ್ಯ ರಸ್ತೆಗಳ ತೆರೆದ ಗುಂಡಿಗಳನ್ನು ತಕ್ಷಣವೇ ಮುಚ್ಚಲು ನಿರ್ದೇಶನ ನೀಡಿದರು.

ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ನ ಶ್ರೀರಕ್ಷೆ ಇದೆ – ಹೊರಟ್ಟಿ!

ಚಿಕ್ಕಬಳ್ಳಾಪುರ : ಬಿಜೆಪಿಯ ಹೈಕಮಾಂಡ್ ತಮ್ಮ ಅಭಿಪ್ರಾಯವನ್ನು ಯತ್ನಾಳ್ ಅವರ ಮೂಲಕ ಹೇಳಿಸುತ್ತಿದೆ ಎಂದು ಶಾಸಕ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಇಂದು ಆರ್ಟ್ ಅಡ್ಡಾ ಉದ್ಘಾಟನೆ

ನಗರದ ಹಾಕಿ ಗ್ರೌಂಡ ಹತ್ತಿರ, ಎಸ್.ಎಂ.ಕೃಷ್ಣ ನಗರ ರಸ್ತೆಯ ಬಳಿ ಮಾ.6 ರಂದು ಶನಿವಾರ ಸಂಜೆ 6-30ಕ್ಕೆ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಆರ್ಟ್ ಅಡ್ಡಾ ಸಭಾಭವನ ಉದ್ಘಾಟನೆ ಹಾಗೂ ಸಂಧ್ಯಾ ಸುರಾಗ ಕಾರ್ಯಕ್ರಮ ನೆರವೇರುವುದು.