ಕಸಾಪ ವತಿಯಿಂದ ಕವಿ-ಬರಹಗಾರರ ಪ್ರೋತ್ಸಾಹ ವೇದಿಕೆ

manvi kasap book

ಕಸಾಪ ವತಿಯಿಂದ ಕವಿ-ಬರಹಗಾರರ ಪ್ರೋತ್ಸಾಹ ವೇದಿಕೆ

ಮಸ್ಕಿ: ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೂತನ ತಾಲ್ಲೂಕಿಗೆ ಒಳಪಡುವ ಕವಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಬರಹಗಾರರ ಸೃಜನಶೀಲತೆಯನ್ನು ಹೆಚ್ಚಿಸಲು ತಾಲ್ಲೂಕ ಮಟ್ಟದ ಕವನ ಸಂಕಲನವನ್ನು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಘನಮಠದಯ್ಯಸ್ವಾಮಿ ಸಾಲಿಮಠ ತಿಳಿಸಿದ್ದಾರೆ.

ತಾಲ್ಲೂಕಿಗೆ ಒಳಪಡುವ ಕವಿಗಳು-ಬರಹಗಾರರು ತಮ್ಮ ಉತ್ತಮವಾದ ಸ್ವ-ರಚಿತ ಎರಡು ಕವನಗಳನ್ನು ಕಳಿಸಬೇಕು. ಆಯ್ಕೆಯಾದ ಕವನವನ್ನು ‘ಕವನ ಸಂಕಲನ’ದಲ್ಲಿ ಪ್ರಕಟಿಸಲಾಗುವದು ಎಂದು ತಿಳಿಸಲಾಗಿದೆ. ಕವಿಗಳು-ಬರಹಗಾರರು ತಮ್ಮ ವ್ಯಕ್ತಿ ಪರಿಚಯ ಹಾಗೂ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಇನ್ನಿತರ ಚಟುವಟಿಕೆಗಳ ಮಾಹಿತಿಯನ್ನು ಮತ್ತು ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯೊAದಿಗೆ ಈ ನವೆಂಬರ್ 30 ರ ಒಳಗೆ ಕಸಾಪ ತಾಲ್ಲೂಕ ಅಧ್ಯಕ್ಷರ ಹೆಸರಿಗೆ ಕಳುಹಿಸಬೇಕಾಗಿ ಬರಹಗಾರರಲ್ಲಿ ವಿನಂತಿ.

Exit mobile version