ಬೆಂಗಳೂರು : ಮಹಾಮಾರಿ ಸೋಂಕಿಗೆ ಬಲಿಯಾಗಿ ಗುಣಮುಖರಾದವರಲ್ಲಿ ಅನಾರೋಗ್ಯ ಕಂಡು ಬರುತ್ತಿದೆ. ಈ ರೀತಿಯ ಬಹುತೇಕ ಜನರಲ್ಲಿ ಕಂಡು ಬಂದಿರುವುದು ಬೆಳಕಿಗೆ ಬರುತ್ತಿದೆ. ಅಲ್ಲದೇ, ಸದ್ಯ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ.
ದೇಹಕ್ಕೆ ಅಂಟಿಕೊಂಡ ಕೊರೊನಾ ಸೋಂಕು ಸಾಮಾನ್ಯವಾಗಿ 7 ರಿಂದ 11 ದಿನಗಳ ನಂತರ ಕಡಿಮೆಯಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ, ಇದರ ಪರಿಣಾಮ ಮಾತ್ರ 4 ವಾರಗಳಿಂದ 6 ವಾರಗಳವರೆಗೂ ಇರುತ್ತದೆ ಎನ್ನಲಾಗಿದೆ. ಈ ಪರಿಣಾಮದಿಂದಾಗಿ ತೀವ್ರ ಆರೋಗ್ಯ ಸಮಸ್ಯೆ ಕೂಡ ಕಂಡು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೋಂಕು ತಗುಲಿದ ಶೇ. 90ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿಯಿಂದಲೇ ವೈರಸ್ ತಾನಾಗಿಯೇ ಹೊರ ಹೋಗುತ್ತದೆ. ರೋಗ ನಿರೋಧಕ ಶಕ್ತಿಯ ಆಧಾರದ ಮೇಲೆಯೇ ಕೊರೊನಾ ತೀವ್ರತೆ ಕಾಡುತ್ತದೆ ಎಂದು ತಿಳಿದು ಬಂದಿದೆ.
ಆದರೆ, ಸದ್ಯದ ಮಾಹಿತಿಯಂತೆ ಒಮ್ಮೆ ಸೋಂಕು ಬಂದವರಿಗೆ ಮತ್ತೆ ತಗಲುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಏಕೆಂದರೆ ಸೋಂಕಿನ ವಿರುದ್ಧ ಪ್ರತಿಕಾಯ ಶಕ್ತಿ ಅಧಿಕವಾಗಿರುತ್ತದೆ ಎಂಬುವುದು ಅಧ್ಯಯನದ ಮೂಲಕ ಸಾಬೀತಾಗಿದೆ. ಆದರೆ, ಹಲವು ಪ್ರಕರಣಗಳಲ್ಲಿ ಗುಣಮುಖರಾದವರಿಗೂ ಸೋಂಕು ತಗುಲಿದೆ. ಕಿಡ್ನಿ, ಹೃದಯ, ಸ್ವಾಶಕೋಶ, ಮಧುಮೇಹ ಇರುವವರಲ್ಲಿ ಹೆಚ್ಚಾಗಿ ರೋಗ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.
