78 ವರ್ಷದ ಅಜ್ಜ ಮದುವೆಯಾಗಿದ್ದು 17 ವರ್ಷದ ಹುಡುಗಿಯನ್ನು!! ಮುಂದೆ ನಡೆದಿದ್ದೇನು?

ಜಕಾರ್ತಾ : 78 ವರ್ಷದ ಅಜ್ಜ 17ರ ಹುಡುಗಿಯನ್ನು ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಆದರೆ ವಿವಾಹವಾದ ಕೇವಲ 22 ದಿನಗಳಲ್ಲಿ ವಿಚ್ಛೇದನ ಪಡೆದಿದ್ದಾರೆ. ಅದೂ ಸಹ 78 ವರ್ಷದ ಅಜ್ಜನೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ವಿಶೇಷ.

ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ದಂಪತಿಯನ್ನು 78 ವರ್ಷದ ಅಬಾ ಸರ್ನಾ ಹಾಗೂ ಪತ್ನಿ ನೋನಿ ನವಿತಾ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಈ ಜೋಡಿ ವಿವಾಹವಾಗಿದ್ದು, ಕಳೆದ ವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವೃದ್ಧ ಹಾಗೂ ಯುವತಿಯ ಮಧ್ಯೆ ವಯಸ್ಸಿನ ವ್ಯತ್ಯಾಸ ಹೆಚ್ಚಾಗಿದ್ದರಿಂದಾಗಿ ಇದು ವಿಶ್ವದ ಗಮನ ಸೆಳೆದಿತ್ತು. 

ಈ ವಿವಾಹಕ್ಕೆ ಎರಡು ಕಡೆಯಿಂದ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ, ಮದುವೆಯಾದ ಇಷ್ಟು ದಿನಗಳಲ್ಲಿಯೇ ವೃದ್ಧ ವಿವಾಹ ವಿಚ್ಛೇದನ ಅರ್ಜಿ ಕಳುಹಿಸಿದ್ದು, ಎಲ್ಲರಿಗೂ ಶಾಕ್ ಆಗಿದೆ. ವಿವಾಹವಾಗುವುದಕ್ಕೂ ಮುನ್ನವೇ ನೋನಿ ಗರ್ಭಿಣಿಯಾಗಿದ್ದರಿಂದ ದಂಪತಿ ಬೇರೆಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ನೋನಿ ಕುಟುಂಬ ವಿರೋಧ ವ್ಯಕ್ತಪಡಿಸಿದೆ. 

ವೃದ್ಧ ವಿವಾಹಕ್ಕೂ ಮೊದಲು ವಧು ದಕ್ಷಿಣೆ ನೀಡಿದ್ದರು. ಸದ್ಯ ಇದನ್ನು ಮರಳಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 

Exit mobile version