ಲಕ್ಷ್ಮೇಶ್ವರ ಪುರಸಭೆಗೆ ಅವಿರೋಧ ಆಯ್ಕೆ: ಪೂರ್ಣಿಮಾ ಅಧ್ಯಕ್ಷೆ , ರಾಮಪ್ಪ ಉಪಾಧ್ಯಕ್ಷ

municipality election laxmeshar

ಲಕ್ಷ್ಮೇಶ್ವರ ಪುರಸಭೆಗೆ ಅವಿರೋಧ ಆಯ್ಕೆ

ಲಕ್ಷ್ಮೇಶ್ವರ: ಇಲ್ಲಿನ ಪುರಸಭೆಗೆ ಚುನಾವಣೆ ನಡೆದು 23 ತಿಂಗಳ ನಂತರ ಇಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.

ಅಧ್ಯಕ್ಷ ಸ್ಥಾನಕ್ಕೆ ಪೂರ್ಣಿಮಾ ಎಂ.ಪಾಟೀಲ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿಯಾಗಿದ್ದ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ ಅಧ್ಯಕ್ಷ ಸ್ಥಾನದ ಅವಿರೋಧವಾಗಿ ಆಯ್ಕೆ ಕುರಿತು ಘೋಷಿಸಿದರು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ರಾಮಪ್ಪ ಬಿ.ಗಡದವರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅದು ಕೂಡ ಅವಿರೋಧ ಆಯ್ಕೆಯಾಯಿತು.

ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕಿಯೆ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಚುನಾವಣೆ ಅಧಿಕಾರಿಯಾಗಿ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ ಹಾಗೂ ಉಪತಹಶೀಲ್ದಾರ ಮಂಜುನಾಥ ದಾಸಪ್ಪನವರ, ಕಂದಾಯ ನಿರೀಕ್ಷಕ ಬಸವರಾಜ ಕಾತರಾಳ, ಮುಖ್ಯಾಧಿಕಾರಿ ಎಸ್.ಎಸ್.ಹುಲ್ಲಮ್ಮನವರ, ಆನಂದ ಬದಿ, ಮಂಜುನಾಥ ಮುದಗಲ್ ಆರ್.ಎಂ.ಪಾಟೀಲ್ ಹಾಜರಿದ್ದರು. ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ ಪಿಎಸ್ಐ ಶಿವಯೋಗಿ ಲೋಹಾರ ಬಂದೋಬಸ್ತ ಒದಗಿಸಿದ್ದರು.

Exit mobile version