ಮೋದಿಗೆ ಮಾಸ್ಕ್ ಕೊಟ್ಟ ರಾಜ್ಯದಲ್ಲಿನ ಕುಟುಂಬ! ಮೋದಿ ಏನು ಹೇಳಿದರು?

ದಾವಣಗೆರೆ : ಕೊರೊನಾದಿಂದಾಗಿ ಇಡೀ ವಿಶ್ವವೇ ನಲುಗುತ್ತಿದೆ. ಹೀಗಾಗಿ ಮಾಸ್ಕ್ ಪ್ರತಿಯೊಬ್ಬರ ಸಂಗಾತಿಯಂತಾಗಿದೆ. ಮಾಸ್ಕ್ ಧರಿಸುವಂತೆ ಪ್ರಧಾನಿ ಮೋದಿ ಕೂಡ ದೇಶದ ಜನರಿಗೆ ಕರೆ ನೀಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಕುಟುಂವೊಂದು ಖಾದಿಯ ಮಾಸ್ಕ್ ಕಳುಹಿಸಿದೆ. ಅದಕ್ಕಾಗಿ ಮೋದಿ ಅವರಿಂದ ಪ್ರಶಂಸನೀಯ ಪತ್ರ ಕೂಡ ಬಂದಿದೆ.

ಇಲ್ಲಿಯ ಕುವೆಂಪು ನಗರದ ಸಾಮಾಜಿಕ ಕಾರ್ಯಕರ್ತ ಕೆ.ಪಿ ವಿವೇಕಾನಂದ ಅವರ ಮನೆಗೆ ಪ್ರಧಾನಿ ಕಚೇರಿಯಿಂದ ಈ ಪ್ರಶಂಸನೀಯ ಪತ್ರ ಬಂದಿದೆ. 

ಬಿಸಾಡುವ ಮಾಸ್ಕ್ ಗಿಂತ ಮರುಬಳಕೆ ಮಾಡುವ ಹಾಗೂ ಸುರಕ್ಷಿತ ಮಾಸ್ಕ್ ನೀಡುವ ಉದ್ದೇಶದಿಂದ ಕೆ.ಪಿ. ವಿವೇಕಾನಂದ ಅವರು, ಅಪ್ಪಟ ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಸಿ ಪ್ರಧಾನಿ ಅವರಿಗೆ ಅರ್ಪಿಸಿದ್ದಾರೆ. ಇದರಿಂದ ವಿವೇಕಾನಂದ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಎಲ್ಲರೂ ಸೇರಿ ದಾವಣಗೆರೆ ಹೆಸರು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.

ಮಾಸ್ಕ್ ಗೆ ಕಾಟನ್ ಬಟ್ಟೆ ಹಾಗೂ ಕ್ಯಾನ್ವಾಸ್ ಬಳಸಿದ್ದರಿಂದ ಮಾಸ್ಕ್ ಸ್ಟಿಫ್ ಆಗಿತ್ತು. ನೋಡಲು ಕೂಡ ಅಂದವಾಗಿದೆ. ಆರಂಭದಲ್ಲಿ ದಾವಣಗೆರೆಗೆ ಮಾತ್ರ ಸೀಮಿತಗೊಳಿಸಿ ಮಾಸ್ಕ್ ತಯಾರಿಸಿದ್ದರು. ರಂಜಿತ್ ಸಿಂಗ್ ಅವ ಸೊಸೆ ಕವಿತಾದೇವಿ ಹಾಗೂ ವಿವೇಕಾನಂದ ಅವರ ಮಗಳು ಕಾವ್ಯಾ ಹೆಸರಿನಲ್ಲಿ ಪ್ರಧಾನಿ ಅವರಿಗೆ ಇಂಡಿಯನ್ ಪೋಸ್ಟ್ ನ ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ಕೇಸರಿ, ಬಿಳಿ, ಹಸಿರು ಮೂರು ಬಣ್ಣದ ಪ್ರತ್ಯೇಕ ಮೂರು ಮಾಸ್ಕ್ ಗಳನ್ನು ಕಳುಹಿಸಿದ್ದರು.

ಅಲ್ಲದೇ, ಇದನ್ನು ಕೆಲವು ದಿನಗಳ ಕಾಲ ಯಾವುದೇ ಉತ್ತರ ಬರಲಿಲ್ಲ. ಆದರೆ, ಕೆಲವು ದಿನಗಳ ನಂತರ ಮೋದಿ ಅವರು ಈ ಮಾಸ್ಕ್ ಗಳನ್ನು ಧರಿಸಿದ್ದರು. ಆ ನಂತರ ಪ್ರಧಾನಿ ಕಚೇರಿಯಿಂದ ಇವರ ಕುಟುಂಬಕ್ಕೆ ಪ್ರಶಂಸನೀಯ ಪತ್ರ ಬಂದಿದೆ. ಇದನ್ನು ನೋಡಿದ ವಿವೇಕಾನಂದ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.

Exit mobile version