ಉಪಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ: ಸಿಎಂ

b.s.yadiyurappa cm karnataka

ಮಾಸ್ಕ್ ಬಳಸದವರಿಗೆ ವಿಧಿಸಲಾಗಿದ್ದ ದಂಡ ಪ್ರಮಾಣದಲ್ಲಿ ಇಳಿಕೆ

ಬೆಂಗಳೂರು:  ಉಪಚುನಾವಣೆ ಬಳಿಕ ತಮ್ಮ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿರುವ ಅವರು ಬೈ ಎಲೆಕ್ಷನ್ ಬಳಿಕ ಸಂಪುಟ ಸರ್ಜರಿ ಬಗ್ಗೆ ಸ್ಪಷ್ಟತೆ ಸಿಗಲಿದೆ. ಈ ವಿಚಾರದ ಬಗ್ಗೆ ಚರ್ಚೆ ಮಾಡಲು ನಾನು ದೆಹಲಿಗೆ  ಹೋಗುತ್ತಿದ್ದೇನೆ. ಇದಾದ ಬಳಿಕ ಸಂಪುಟ ಪುನಾರಚನೆಯೋ, ವಿಸ್ತರಣೆಯೋ ಎಂಬುದು ತಿಳಿಯುತ್ತದೆ ಎಂದು  ತಿಳಿಸಿದರು.

ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ನಾನು ಪ್ರಚಾರಕ್ಕೆ ಹೋಗದಿದ್ದರೂ ಅವರನ್ನು ಗೆಲ್ಲಿಸಿಕೊಳ್ಳುವ ಶಕ್ತಿ ನಮ್ಮ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಿಗಿದೆ ಎಂದು ತಮ್ಮ ಪಕ್ಷದ ಶಕ್ತಿ ಬಗ್ಗೆ ಬಿಎಸ್‌ ವೈ ಹೇಳಿದರು.

ಈಗಾಗಲೇ ಎರಡೂ ಕಡೆ ವಿಪಕ್ಷ ನಾಯಕರು ಮಾಜಿ ಪ್ರಧಾನಿಗಳು, ಮಾಜಿ ಸಿಎಂಗಳು ಪ್ರಚಾರ ನಡೆಸಿ ಬಂದಿದ್ದಾರೆ. ಅವರುಗಳು ಹೋದ ಮೇಲೆ ಸಿಎಂ ಆಗಿ ನಾನು ಹೋಗದಿದ್ದರೆ ಹೇಗೆ? ಆ ಕಾರಣಕ್ಕಾಗಿ ನಾನು ನಾಳೆ ನಾಡಿದ್ದು ಅಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ ಎಂದು ಯಡಿಯೂರಪ್ಪ  ಹೇಳಿದರು. 

Exit mobile version