-ಮಿನೂ
ಗದಗ: ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ರಾಜಕೀಯದಿಂದ ನಿವೃತ್ತಿ ಹೊಂದುವರೇ? ಹಿಗೊಂದು ಪ್ರಶ್ನೆ ಇದೀಗ ಅವರ ಮಾತಿನಿಂದಲೇ ಮೂಡಿದೆ. ಹೀಗಾಗಿ ರಾಜಕೀಯ ವಲಯದಲ್ಲಿ ಹೊರಟ್ಟಿ ಅವರ ಹೇಳಿಕೆ ಗುಸುಗುಸು ಚರ್ಚೆಗೆ ಮುನ್ನುಡಿ ಬರೆದಂತಾಗಿದೆ.
ಸದ್ಯ ಈ ರೀತಿ ಹೇಳುತ್ತಿರುವುದು ನಾವಲ್ಲ. ಸ್ವತ: ಅವರೇ ಈ ರೀತಿಯ ಮಾತುಗಳನ್ನು ಮಾತನಾಡಿದ್ದಾರೆ. ಸದ್ಯ ರಾಜರಾಜಕಾರಣದಲ್ಲಿ ಯಾವುದೂ ಸರಿಯಿಲ್ಲ. ಹೀಗಾಗಿ ರಾಜಕಾರಣ ಮಾಡುವುದೇ ಬೇಡ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಬಸುರಾಜ ಹೊರಟ್ಟಿ ಅವರು ಹಿರಿಯ ನಾಯಕರು. ಜೆಡಿಎಸ್ ನಲ್ಲಿ ಪ್ರಭಲ ವ್ಯಕ್ತಿ. ಆದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ತಪ್ಪಿಸಲಾಗಿತ್ತು. ಜೆಡಿಎಸ್ ಅಧಿಕಾರಕ್ಕೆ ಬಂದ ಪ್ರತಿ ಬಾರಿಯೂ ಬಸವರಾಜ ಹೊರಟ್ಟಿ ಅವರು ಸಚಿವರಾಗುತ್ತಿದ್ದರು. ಆದರೆ, ಮೈತ್ರಿ ಇದ್ದ ಸಂದರ್ಭದಲ್ಲಿ ಕೂಡ ಅವರ ಅಭಿಮಾನಿಗಳು ಇದನ್ನೇ ನಿರೀಕ್ಷಿಸಿದ್ದರು. ಆದರೆ ಜೆಡಿಎಸ್ ವರೀಷ್ಟರ ತೀರ್ಮಾನ ಮಾತ್ರ ಬೇರೆಯಾಗಿತ್ತು.
ತೆರೆಮರೆಯಲ್ಲಿ ಮಂತ್ರಿಗಿರಿಗಾಗಿ ಸಾಕಷ್ಟು ಪ್ರಯತ್ನಿಸಿದರೂ ಹೊರಟ್ಟಿ ಅವರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿರಲಿಲ್ಲ. ವಿಧಾನ ಪರಿಷತ್ ಸಭಾಧ್ಯಕ್ಷ ಸ್ಥಾನವನ್ನು ವಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದರು ಎಂದು ಅವರ ಆಪ್ತ ವಲಯದಿಂದಲೇ ಕೇಳಿ ಬಂದಿತ್ತು.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ಗೆ ಅಷ್ಟೆನೂ ಗಟ್ಟಿ ನೆಲೆ ಇಲ್ಲದ ಸಂದರ್ಭದಲ್ಲಿಯೂ ಹೊರಟ್ಟಿ ಅವರು ಮಾತ್ರ ಶಿಕ್ಷಕರ ಕ್ಷೇತ್ರದಿಂದ ಸತತ ಗೆಲವು ದಾಖಲಿಸಿದ್ದು ಇತಿಹಾಸ. ಕಳೆದ ಕಳೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಹೊರಟ್ಟಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದು ಕೂಡ ಅವರಲ್ಲಿ ಇರಿಸು ಮುರಿಸು ಉಂಟು ಮಾಡಿತ್ತು ಎಂದು ಅವರ ನಿಕಟ ವರ್ತಿಗಳ ಅಭಿಪ್ರಾಯವಾಗಿದೆ.
ಇನ್ನು ಉತ್ತರ ಕರ್ನಾಟಕದಲ್ಲಿ ಈಗಾಗಲೇ ಹೊರಟ್ಟಿ ಅವರ ನಾಯಕತ್ವ ಪ್ರಶ್ನಿಸಿ ವರೀಷ್ಟರ ಗಮನಕ್ಕೆ ತಂದ ಉದಾಹರಣೆಗಳು ಇವೆಯಂತೆ. ಹೊಂದಾಣಿಕೆ ರಾಜಕಾರಣದ ಆರೋಪ ಹೊರಟ್ಟಿ ಅವರ ಮೇಲೆ ಸಾಮಾನ್ಯವಾಗಿದೆ. ಇನ್ನು ಕಳೆದ ಪಶ್ಚಿಮ ಪದವಿಧರರ ಕ್ಷೇತ್ರದ ಚುನಾವಣೆಗೆ ಅವರ ಪುತ್ರನನ್ನು ಕಣಕ್ಕಿಳಿಸಿ ಪುತ್ರನ ಅದಷ್ಟÀ್ಟ ಪರೀಕ್ಷೆಗೂ ಮುಂದಾಗಿದ್ದರು. ಆದರೆ ಅದರಲ್ಲಿ ಯಶ ಕಾಣಲಿಲ್ಲ.
ಪಕ್ಷದೊಂದಿಗೆ ಬಸವರಾಜ ಹೊರಟ್ಟಿ ಅವರು ಅಂತರ ಕಾಯ್ದು ಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಸದ್ಯ ಈಗಲೂ ಅದೇ ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಮಾತುಗಳು ಚಾಲ್ತಿಯಲ್ಲಿವೆ. ಹೀಗಾಗಿಯೇ ಅವರು ಈ ರೀತಿಯ ಮಾತುಗಳನ್ನು ಆಡುತ್ತಿರಬಹುದು ಎಂದು ಪ್ರತಿಯೊಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ.
ಇಂದು ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಸಿಎಂ ಕುರ್ಚಿಯ ಕನಸಿನ ಬಗ್ಗೆ ಮಾತನಾಡಿದ್ದಾರೆ. ಸಿಎಂ ಹುದ್ದೆಯ ಗುದ್ದಾಟ ಒಂದು ತಿರುಕನ ಕನಸಿನಂತಿದೆ. ಕನಸಿನಲ್ಲಿ ಸಿಎಂ ಆಗುವುದು ತಪ್ಪಲ್ಲ. ತಿರುಕನೂ ಕೂಡ ಕನಸಿನಲ್ಲಿ ರಾಜ ಆಗಿರುತ್ತಾನೆ.
ನಾನು ಕೂಡ ಕನಸುಗಾರನೇ. ನಾನು ಸಾಕÀಷ್ಟು ಕನಸು ಕಾಣುತ್ತೇನೆ. ಎಲ್ಲರೂ ಕನಸು ಕಾಣಲಿ. ಆದರೆ, ಸಿಎಂ ಹುದ್ದೆಯಿಂದ ಹಿಡಿದು ಎಲ್ಲ ರೀತಿಯ ಕನಸು ಕಾಣುತ್ತು ಕುಳಿತುಕೊಳ್ಳುವವರು ತಿರಕರೇ ಎಂದು ವ್ಯಂಗ್ಯವಾಡಿದ್ದಾರೆ.
ಮುAದುವರೆದು ಮಾತನಾಡಿದ ಅವರು ಈಗಿನ ರಾಜ್ಯ ರಾಜಕೀಯದಲ್ಲಿ ಯಾವುದೂ ಸರಿಯಾಗಿಲ್ಲ. ರಾಜಕಾರಣ ಮಾಡೋದು ಬೇಡ ಎನಿಸುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ರಾಜಕೀಯವೇ ಬೇಡ ಎನಿಸುತ್ತಿದೆ ಎಂದು ಪ್ರಸ್ತುತ ರಾಜಕಾರಣದ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ಇದನ್ನೆಲ್ಲ ಗಮನಿಸಿದಾಗ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರಿಗೆ ರಾಜಕೀಯ ಸಾಕಾಗಿದೆಯೇ? ರಾಜಕಾರಣದಲ್ಲಿ ಯಾವುದು ಸರಿ ಇಲ್ಲ ದು ಹೇಳುವ ಹೊರಟ್ಟಿ ಅವರು ರಾಜಕಾರಣದಿಂದ ದೂರ ಸರಿಯುವರೇ? ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ಇದಕ್ಕೆ ಕಾಲವೇ ಉತ್ತರ ನೀಡಲಿದೆ.
