ಮಹಿಳೆಯರನ್ನು ರಕ್ಷಿಸಬೇಕಾದ ಪೊಲೀಸನೇ ಇಲ್ಲಿ ಕಿರುಕುಳ ನೀಡಿದ್ದಾನೆ!!

ನವದೆಹಲಿ: ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಬ್ ಇನ್ಸಪೆಕ್ಟರ್ ಒಬ್ಬರನ್ನು ಬಂಧಿಸಿದ್ದಾರೆ.

ಪುನಿತ್ ಗ್ರೋವಲ್ ಎಂಬ ಸಬ್ ಇನ್ಸಪೆಕ್ಟರ್ ಅವರನ್ನೇ ಬಂಧಿಸಲಾಗಿದೆ. ಕಳೆದ ಕೆಲವು ದಿನಗಳಿಂದ ದೆಹಲಿಯ ದ್ವಾರಕಾ ನಗರದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ಓರ್ವ ವ್ಯಕ್ತಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಕುರಿತು ದೂರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮೌಖಿಕ ದೂರು ಸಲ್ಲಿಸಲಾಗಿತ್ತು.

ಎಫ್‍ ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪತ್ತೆಗಾಗಿ ದ್ವಾರಕಾ ನಗರದಲ್ಲಿಯ 200ಕ್ಕೂ ಅಧಿಕ ಸಿಸಿಟಿವಿ ಫೂಟೇಜ್ ಸಂಗ್ರಹಿಸಿದ್ದರು. ಸಿಸಿಟಿವಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರು ಪತ್ತೆಯಾಗಿತ್ತು. ಅದರ ಮೂಲ ಹಿಡಿದು ತೆರಳಿದ ಪೊಲೀಸರಿಗೆ ಆರೋಪಿ ಓರ್ವ ಸಬ್ ಇನ್ಸ್ಪೆೀಕ್ಟರ್ ಎಂಬ ವಿಷಯ ಬೆಳಕಿಗೆ ಬಂದಿದೆ.

ಅ. 17 ಮತ್ತು ಅ. 20ರ ನಡುವೆ ನಡೆದಿದೆ. ಪುನೀತ್, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಮಾತನಾಡುವ ನೆಪದಲ್ಲಿ ಮಹಿಳೆಯರ ಬಳಿ ತೆರಳುತ್ತಿದ್ದ ಪುನೀತ್ ಕಿರುಕುಳ ನೀಡುತ್ತಿದ್ದನು. ಹಲವರು ಈತನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರೆ, ಕೆಲವರು ಪೊಲೀಸ್ ಹೆಲ್ಪ್ ಲೈನ್ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version