ಮಸ್ಕಿ: ಚನ್ನಬಸವ ಕುಟುಂಬಕ್ಕೆ ಸಹಾಯಧನ ವಿತರಣೆ

masky kada parihara

channabasava family parihar

ಮಸ್ಕಿ: ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ಚನ್ನಬಸವ ಮಡಿವಾಳ ಅವರ ಮನೆಗೆ ತುಂಗಾಭದ್ರ ಕಾಡಾ ಅಧ್ಯಕ್ಷ ಆರ್ ಬಸನಗೌಡ ತುರವಿಹಾಳ ಅವರ ಭೇಟಿ ನೀಡಿ ಅವರ ಕುಟುಂಬಕ್ಕೆ 50 ಸಾವಿರ ಸಹಾಯಧನ ನೀಡಿದರು.

ಬಳಿಕ‌ ಆರ್ ಬಸನಗೌಡ ತುರವಿಹಾಳ ಅವರು ಮಾತನಾಡಿ, ಚನ್ನಬಸವನನ್ನು ಹುಡಕಲು ತಾಲೂಕ ಆಡಳಿತ ಸಾಕಷ್ಟು ಪ್ರಯತ್ನ ಪಟ್ಟಿದೆ. ಆದರೂ ಅವರ ದೇಹ ಸಿಗಲಿಲ್ಲ. ಈ ಕುರಿತು ರಾಜ್ಯ ಸರಕಾರ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡಲು ಒತ್ತಾಯ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಿದ್ದನಗೌಡ ಮಾಟೂರ ಸಿದ್ದಣ್ಣ ಹೂವಿನಭಾವಿ ಅಪ್ಪಾಜಿ ಗೌಡ ಪಾಟೀಲ, ಅಭಿಜಿತ್ ಪಾಟೀಲ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಸೇರಿದಂತೆ ಇನ್ನಿತರರು ಹಾಜರಿದ್ದರು.

Exit mobile version