ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಗುಡುಗಿದ ತೇಜಸ್ವಿ ಯಾದವ್!

ಪಾಟ್ನಾ : ಸಿಎಂ ಯೋಗಿ ಆದಿತ್ಯನಾಥ್ ಅವರ ಭಾಷಣದ ವಿರುದ್ಧ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಯಾರು, ಯಾವ ರಾಜ್ಯದಿಂದ, ಯಾವ ವಿಷಯದೊಂದಿಗೆ ಬರುತ್ತಾರೆ ಎಂಬುವುದು ನಮಗೆ ಮುಖ್ಯವಲ್ಲ. ನಿರುದ್ಯೋಗ, ಬಡತನ, ವಲಸೆಯಂತಸಹ ಸಮಸ್ಯೆಗಳು ಬಗೆಹರಿಯುವುದು ನಮಗೆ ಮುಖ್ಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಕೇಂದ್ರ ಹಣಕಾಸು ಸಚಿವರು ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ. ಇಲ್ಲಿಯವರೆಗೂ ಬಿಹಾರಕ್ಕೆ ಏಕೆ ವಿಶೇಷ ಸ್ಥಾನಮಾನ ಹಾಗೂ ಪ್ಯಾಕೇಜ್ ನ್ನು ಏಕೆ ನೀಡಲಿಲ್ಲ ಎಂಬುವುದರ ಬಗ್ಗೆ ನಿರ್ಮಲಾ ಸೀತಾರಾಮನ್ ಮಾತನಾಡಬೇಕು ಎಂದು ಒತ್ತಾಯಿಸಿದರು.

15 ವರ್ಷಗಳ ಕಾಲ ಆಡಳಿತ ನಡೆಸಿದ ನಂತರವೂ ಬಜೆಟ್‌ ನಲ್ಲಿನ ವಿನಾಯಿತಿಗಳು, ಅವುಗಳನ್ನು ಹೇಗೆ ಖರ್ಚು ಮಾಡಬೇಕೆಂಬುವುದು ಅವರಿಗೆ ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

ಬಿಹಾರದ ರೂ. 2,11,761 ಕೋಟಿ ಬಜೆಟ್ ನಲ್ಲಿ ಶೇ.40 ರಷ್ಟು ಹಣವನ್ನು ಎನ್ ಡಿಎ ಸರ್ಕಾರ ವೆಚ್ಚ ಮಾಡಿಲ್ಲ. ಸಾಲ, ಬೇಜವಾಬ್ದಾರಿತನ, ಭ್ರಷ್ಟಾಚಾರ, ಕಳಪೆ ನೀತಿಗಳು ಇದಕ್ಕೆ ಕಾರಣವಾಗಿದೆ. ವೆಚ್ಚ ಮಾಡದೆ ಇರುವ ಬೃಹತ್ ಹಣವನ್ನು ನಿತೀಶ್ ಕುಮಾರ್, ಸುಶೀಲ್ ಕುಮಾರ್ ಮೋದಿ ಅವರಂತೆಯೇ ಜಾತಿ ಮತ ಬ್ಯಾಂಕ್ ಸೃಷಿಸಲು ಬಳಸದೆ ನೂತನ ಅಭಿವೃದ್ಧಿ ಕೆಲಸಗಳಿಗಾಗಿ ಸುಲಭವಾಗಿ ನಾವು ಬಳಸುತ್ತೇವೆ ಎಂದರು.

Exit mobile version