ಕ್ರಿಕೆಟ್ ನಲ್ಲಿ ಧೋನಿ ಸ್ಥಾನದಲ್ಲಿ ಧೋನಿ ಮಾತ್ರ ಇದ್ದಾರೆ…ಬೇರೆ ಯಾರೂ ಇಲ್ಲ ಎಂದ ರಾಹುಲ್!

ಬೆಂಗಳೂರು: ನಾಲ್ಕು ಬಾರಿ ಚಾಂಪಿಯನ್ ಆಗಿರುವ ಮುಂಬಯಿ ಇಂಡಿಯನ್ಸ್ ತಂಡದ ವಿರುದ್ಧ ಎರಡು ಸೂಪರ್ ಓವರ್ ಆಡಿ ಭರ್ಜರಿಯಾಗಿ ಗೆದ್ದು ಬೀಗಿರುವ ಖುಷಿಯಲ್ಲಿರುವ ಪ್ರೀತಿಯ ಹುಡುಗರು, ಈಗ ಆತ್ಮವಿಶ್ವಾಸದಲ್ಲಿದ್ದಾರೆ. 

ಕೆಎಲ್ ರಾಹುಲ್ ಅವರು ಮುಂಬಯಿ ವಿರುದ್ಧದ ಮೊದಲ ಸೂಪರ್ ಓವರ್ ಕೊನೆಗೆ ರನೌಟ್ ಮಾಡಿದ ರೀತಿ ನೋಡಿ ಹಲವಾರು ಫ್ಯಾನ್ಸ್ ನೀವು ನಮ್ಮ ತಲಾ(ಧೋನಿಗೆ ಹೋಲಿಸಿ) ನಾಯಕ ಎಂದು ಕೊಂಡಾಡಿದ್ದಾರೆ. ಆದರೆ, ಹೊಗಳಿಕೆಯನ್ನು ನಯವಾಗಿ ನಿರಾಕರಿಸಿ, ತಲಾ ಎಂದಿದ್ದರೂ ಒಬ್ಬರೇ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ಒಬ್ಬರೇ ತಲಾ ಇರುವುದು. ಅದು ಯಾರು ಎಂಬುವುದು ಎಲ್ಲರಿಗೂ ತಿಳಿದಿದೆ’ ಎಂದು ರಾಹುಲ್ ತಮ್ಮ ಮಹಿಳಾ ಅಭಿಮಾನಿಯೊಬ್ಬರ ಟ್ವೀಟಿಗೆ ಉತ್ತರಿಸಿದ್ದಾರೆ.

Exit mobile version