ಮುಳಗುಂದ: ಅತಿವೃಷ್ಟಿ ಜಮೀನಿಗಳಿಗೆ ಕೃಷಿ ಅಧಿಕಾರಿ ಭೇಟಿ

ಮುಳಗುಂದ : ಪಟ್ಟಣ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ ಅತಿವೃಷ್ಟಿಯಿಂದ ಉಂಟಾಗಿ ಬೆಳೆ ಹಾನಿ ಜತೆಗೆ ನೂರಾರು ಎಕರೆ ಹೊಲಗಳ ಬದವು ಕೊಚ್ಚಿಕೊಂಡು ಹೋಗಿದ್ದ ಹೊಲಗಳಿಗೆ ಗದಗ ತಾಲೂಕ ಕೃಷಿ ಸಹಾಯಕ ಅಧಿಕಾರಿ ಮಲ್ಲಯ್ಯ ಕೊರವನವರ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಸಾಪೂರ ವ್ಯಾಪ್ತಿಯ ಸರ್ವೇ ನಂ 114 ರೇವಣಪ್ಪ ಕುಲಕರ್ಣಿ ಅವರ ಜಮೀನಿನ ಬದವು ಮಳೆ ನೀರಿನ ಸೇಳೆತಕ್ಕೆ ಕೊಚ್ಚಿಕೊಂಡು ಹೋಗಿದೆ. ಪ್ರಮುಖ ವಾಣಿಜ್ಯ ಬೆಳೆಗಳಾದ ಶೇಂಗಾ, ಗೋವಿನ ಜೋಳ, ಹತ್ತಿ ಬೆಳಗಳು ಸಹ ಅಧಿಕ ತೇವಾಂಶದಿಂದ ಕೊಳೆ ರೋಗಕ್ಕೆ ತುತ್ತಾಗಿರುವದನ್ನ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಮುಳಗುಂದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಮೀನುಗಳಿಗೆ ಬದು ದುರಸ್ತಿಯನ್ನು ಮಾಡಿಸಲು ನರೇಗಾ ಯೋಜನೆ ಅಡಿ ಸಾಧ್ಯವಿಲ್ಲ. ಹೀಗಾಗಿ ಪ್ರಕೃತಿ ವಿಕೋಪ ಪರಿಹಾರದಡಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬೆಳೆಹಾನಿಯಾದ ರೈತರು ಆತಂಕ ಪಡಬೇಕಾಗಿಲ್ಲ. ಗದಗ ತಾಲೂಕನ್ನೂ ಅತಿವೃಷ್ಟಿ ತಾಲೂಕ ಎಂದು ಸರ್ಕಾರ ಘೋಷಣೆ ಮಾಡಿದೆ. ಎನ್‌ಡಿಆರ್‌ಎಪ್ಮಾ

ರ್ಗಸೂಚಿಗಳನ್ವಯ ಈಗಾಗಲೇ ತಾಲೂಕಿನಲ್ಲಿ ಅದಾಜು 28540 ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ವರದಿ ಮಾಡಲಾಗಿದೆ.

ಬೆಳೆವಿಮೆ ಮಾಡಿಸಿದ ರೈತರು ತಮ್ಮ ಬೆಳೆ ಹಾನಿಯಾಗಿರುವ ಬಗ್ಗೆ ಬೆಳೆ ವಿಮಾ ಸಂಸ್ಥೆಗೆ ಸ್ಥಳೀಯ ಅತಿವೃಷ್ಟಿ ಉಂಟಾಗಿರುವ ಕುರಿತು ಸೋಮವಾರದ ಒಳಗಾಗಿ ಅರ್ಜಿ ಸಲ್ಲಿಸಲು ಮಾಹಿತಿ ತಿಳಿಸಿದರು.

ಬೆಳೆ ಹಾನಿಯಾಗಿರುವ ಬಗ್ಗೆ ರೈತರಾದ ರೇವಣಪ್ಪ ಕುಲಕರ್ಣಿ, ಪಪಂ ಸದಸ್ಯ ಕೆ.ಎಲ್.ಕರಿಗೌಡ್ರ, ಬಗರಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳಿಯ ಸಹಾಯಕ ಕೃಷಿ ಅಧಿಕಾರಿ ಎಂ.ಬಿ.ಸುಂಕಾಪೂರ, ಗ್ರಾಮ‌ಲೆಕ್ಕಾಧಿಕಾರಿ ಎನ್.ಸಿ. ಕಂಪ್ಲಿಕೊಪ್ಪ ಇದ್ದರು.

Exit mobile version