ರಾಜ್ಯದಲ್ಲಿ ಇಂದು 8 ಸಾವಿರದ ಗಡಿ ದಾಟಿದ ಮಹಾಮಾರಿ!

corona covid19 karnataka

taday corona update

ಬೆಂಗಳೂರು : ರಾಜ್ಯದಲ್ಲಿ ಇಂದು 8,477 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,43,848ಕ್ಕೆ ಏರಿಕೆ ಕಂಡಿದೆ.

ಆಸ್ಪತ್ರೆಯಿಂದ ಇಂದು 8,841 ಜನ ಬಿಡುಗಡೆ ಹೊಂದಿದ್ದಾರೆ. ಅಲ್ಲದೇ, 85 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ 6,20,008 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದೆ. ಇನ್ನೂ ರಾಜ್ಯದಲ್ಲಿ 1,13,538 ಸಕ್ರಿಯ ಪ್ರಕರಣಗಳಿವೆ.

ಇಲ್ಲಿಯವರೆಗೆ ಒಟ್ಟು 10,283 ಜನ ಮೃತಪಟ್ಟಿದ್ದು, 939 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 30,977 ಆಂಟಿಜನ್‌, 73,834 ಆರ್‌ಟಿ ಪಿಸಿಆರ್‌ ಸೇರಿದಂತೆ ಒಟ್ಟು 1,04,811 ಜನರಲ್ಲಿ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 63,55,803 ಕೊರೊನಾ ಟೆಸ್ಟ್ ಪರೀಕ್ಷೆಗಳು ನಡೆದಿವೆ.

ಇಂದು ಬೆಂಗಳೂರು ನಗರದಲ್ಲಿ 3,788 , ಬೆಂಗಳೂರು ಗ್ರಾಮಾಂರ 454, ಹಾಸನ 440, ಮೈಸೂರು 303, ಬೆಳಗಾವಿ 303, ದಕ್ಷಿಣ ಕನ್ನಡ 301 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

Exit mobile version