ಹೈದರಾಬಾದ್ : ನಟ ಮಹೇಶ್ ಬಾಬು ಹಾಗೂ ಸ್ವೀಟಿ ಅನುಷ್ಕಾ ಶೆಟ್ಟಿ ಅವರಿಗೆ ಇಂದು ವಿಶೇಷ ದಿನವಂತೆ. ಈ ನಿಟ್ಟಿನಲ್ಲಿ ಇಬ್ಬರೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಈ ಇಬ್ಬರೂ ಸೆಲೆಬ್ರಿಟಿಗಳು ಅಭಿನಯಿಸಿದ ಸೂಪರ್ ಹಿಟ್ ಖಲೇಜಾ ಸಿನಿಮಾ ಇಂದು ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾಗಿ ಇಂದಿಗೆ 10 ವರ್ಷಗಳು ಕಳೆದಿವೆ. ಅದು ಸೂಪರ್ ಹಿಟ್ ಆಗಿ, ಅಭಿಮಾನಿಗಳ ಮನ ಗೆದ್ದಿತ್ತು. ಈಗ ಇಬ್ಬರೂ ಜೊತೆಗೂಡಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇಬ್ಬರ ಕಾಂಬಿನೇಷನ್ ಗೆ ಆಗಿನಿಂದಲೂ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ಸಿನಿಮಾವನ್ನು ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದರು. ಖಲೇಜಾ ಸಿನಿಮಾಗೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದರು. ಈಗ ಈ ಚಿತ್ರ 10 ವರ್ಷಗಳನ್ನು ಪೂರೈಸುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಮಹೇಶ್ ಬಾಬು, ಖಲೇಜಾ ಸಿನಿಮಾ ಬಿಡುಗಡೆಯಾಗಿ 10 ವರ್ಷ ಪೂರೈಸಿದೆ. ನಟನಾಗಿ ನನ್ನನ್ನು ಮರುಶೋಧಿಸಿದ ಸಿನಿಮಾ ಇದು. ಹೀಗಾಗಿ ಈ ಚಿತ್ರ ವಿಶೇಷವಾಗಿ ನನ್ನ ಮನದಲ್ಲಿ ಉಳಿಯುತ್ತದೆ. ನನ್ನ ಸ್ನೇಹಿತ ಮತ್ತು ನಿರ್ದೇಶಕ ತ್ರಿವಿಕ್ರಮ್ಗೆದ ಧನ್ಯವಾದಗಳು. ಮುಂದಿನ ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ಕೂಡ ಮಹೇಶ್ ಬಾಬು ಟ್ವೀಟ್ಗೆು ಪ್ರತಿಕ್ರಿಯೆ ನೀಡಿದ್ದು, ಈ ಸಿನಿಮಾದ ಸಾಕಷ್ಟು ನೆನಪುಗಳಿವೆ. ಮಹೇಶ್ ಬಾಬು, ತ್ರಿವಿಕ್ರಮ್ ಅವರಿಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
