ನಕಲಿ ಓಟರ್ ಐಡಿ ತಯಾರಿಸುತ್ತಿದ್ದ ಜಾಲ ಪೊಲೀಸ್ ಬಲೆಗೆ

haveri fake otter

ನಕಲಿ ಓಟರ್ ಐಡಿ ತಯಾರಿಸುತ್ತಿದ್ದ ಜಾಲ ಪೊಲೀಸ್ ಬಲೆಗೆ

ಹಾವೇರಿ: ನಕಲಿ ಓಟರ್ ಐಡಿ ತಯಾರಿಸುತ್ತಿದ್ದ ಜಾಲವನ್ನು ಹಾವೇರಿ ಪೊಲೀಸರು ಜಾಲಾಡಿದ್ದಾರೆ. ಡಿಸಿ ಹಾಗು ಎಡಿಸಿ ನೇತೃತ್ವದಲ್ಲಿ ದಾಳಿ ನಡೆಸಿ ನಕಲಿ ಓಟರ್ ಐಡಿ ತಯಾರಿಸುತ್ತಿದ್ದ ತಂಡವನ್ನು ಭೇದಿಸುವಲ್ಲಿ ಯಶಸ್ವಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ.

ಜಿಲ್ಲಾಧಿಕಾರಿ ಸಂಜಯ್ ಮತ್ತು ಎಡಿಸಿ ಯೋಗಿಶ್ವರ ಹಾಗೂ ಪೋಲಿಸ್ ಇಲಾಖೆ ಜಂಟಿ ಕಾರ್ಯಾಚರಣೆಯ ಮೂಲಕ

ಇಲ್ಲಿನ ಒನ್ ಡಿಜಿಟಲ್ ಸೇವಾ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ಹಾವೇರಿ ನಗರದ ಹುಕ್ಕೇರಿ ಮಠದ ಮುಂಭಾಗದಲ್ಲಿ ಘಟನೆ ನಡೆದಿದ್ದು, ಜೀವನಸಿಂಗ್ ರಜಪೂತ್, ನವೀನ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಹದಿನೈದು ದಿನಗಳಿಂದ ಖಚಿತ ಮಾಹಿತಿ ಮೇಲೆ ಜಿಲ್ಲಾಡಳಿತ ಕಾರ್ಯಾಚರಣೆಗೆ ಪ್ರಯತ್ನಿಸುತ್ತಿತ್ತು. ಆದರೆ ಇಂದು ಕೊನೆಗೂ ನಕಲಿ ಓಟರ್ ಐಡಿ ತಯಾರಿಸುತ್ತಿದ್ದ ಜಾಲ ಸಿಕ್ಕಿಬಿತ್ತು.

ನಕಲಿ ಮತದಾನ ಗುರುತಿನ ಚಿಟಿ ತಯಾರಿಸಲು ಆರೋಪಿ ಜೀವನಸಿಂಗ್, ಕೇರಳ ಮತ್ತು ಹರಿಯಾಣ ರಾಜ್ಯದಿಂದ ನಕಲಿ ಸಾಫ್ಟವೇರ್ ತೆಗೆದುಕೊಂಡಿದ್ದ ಎನ್ನಲಾಗಿದೆ. ಸಾಪ್ಟವೇರ್ ನಲ್ಲಿ ನಕಲಿ ಮತಪತ್ರ ತಯಾರು ಮಾಡಿ ಅಧಿಕ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಸೇವಾ ಸಿಂಧು ಕೇಂದ್ರ ಬಂದ್ ಮಾಡಿದ್ದಾರೆ. ಈ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version