ವಾರದ ಮಲ್ಲಪ್ಪನವರ ಸಮಾಜಿಕ ಸೇವೆ ಅಪಾರ : ಅಂದಾನೆಪ್ಪ ವಿಭೂತಿ

mulagunda balalila samiji

ವಾರದ ಮಲ್ಲಪ್ಪನವರ ಸಮಾಜಿಕ ಸೇವೆ ಅಪಾರ : ಅಂದಾನೆಪ್ಪ ವಿಭೂತಿ

ಮುಳಗುಂದ: ವಾರದ ಮಲ್ಲಪ್ಪ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಮಾಡಿದ ಸೇವೆ ಅಪಾರವಾದದ್ದು. ಎಂದು ವಿಭೂತಿ ಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿ ಹೇಳಿದರು.

ಅವರು ಪಟ್ಟಣದ ಬಾಲಲೀಲಾ ಮಹಾಂತ ಶೀವಯೋಗಿಗಳ ಕಲಾಭವನದಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೋಬಳಿ ಘಟಕ, ಮುಳಗುಂದ ಲಿಂ ಗಂಗಮ್ಮ ಚವಡಿ, ಲಿಂ. ಚನ್ನಬಸಪ್ಪ ವೀ ಚವಡಿ ಇವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಾರದ ಮಲ್ಲಪ್ಪನವರ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ವಾರದ ಮಲ್ಲಪ್ಪನವರು ಆಗಿನ ಕಾಲದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿದ ಪ್ರಥಮ ಭಾರತೀಯರು. ಬೇರೆ ಬೇರೆ ದೇಶಗಳಿಂದ ಬೀಜಗಳನ್ನು ತರಿಸಿಕೊಂಡು ಶೇಂಗಾ, ಕಬ್ಬು ಬೆಳೆಯುವದರಲ್ಲಿ ಯಶಸ್ವಿಯಾದರು ದೇಶದಲ್ಲೇ ಮೂದಲಿಗೆ ಇವರಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿದರು.

ಇವರ ವೈಜ್ಞನಿಕ ಕೃಷಿ ಪದ್ಧತಿಯಿಂದ ಪ್ರೇರಿತರಾಗಿ ೪೫೦೦೦ ಎಕರೆಯಲ್ಲಿ ಹತ್ತಿ ಬೆಳೆ ಬೆಳೆದರು. ಮಲ್ಲಪ್ಪನವರ ದೃಷ್ಟಿ ವಾಣಿಜ್ಯ, ಉದ್ಯಮಕ್ಕೆ ಮಾತ್ರ ಸಿಮೀತವಾಗಿರಲಿಲ್ಲ. ಅವರು ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕೃತಿಗಳಲ್ಲೂ ತದೇಕ ಆಸಕ್ತಿ ಉಳ್ಳುವರಾಗಿದ್ದಾರು.  ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ದೇಶದ ೧೨ ಜನ ಶ್ರೀಮಂತರಲ್ಲಿ ವಾರದ ಮಲ್ಲಪ್ಪನವರು ಒಬ್ಬರಾಗಿದ್ದರು. 

ವಾರದ ಮಲ್ಲಪ್ಪನವರು ಲೆಕ್ಕ ಪತ್ರಗಳನ್ನು ನಿಭಾಹಿಸುವಲ್ಲಿ ಬ್ರಿಟಿಷ್‌ ಸರ್ಕಾರಕ್ಕೆ ಮಾದರಿಯಾಗಿದ್ದರು. ಸೊಲ್ಲಾಪುರ ಪಟ್ಟಣವನ್ನು ಮುಂದೆ ತರುವ ದೃಷ್ಟಿಯಿಂದ ನರಸಿಂಗ ಗಿರ್ಜಿ ಮಿಲ್‌ ಎಂಬ ಹೆಸರಿನ ಬಟ್ಟೆ ಗಿರಣೆಯನ್ನು ಪ್ರಾರಂಬಿಸಿದರು. ಮಲ್ಲಪ್ಪನವರ ಕನಸಿನಿಂದ ಸೊಲ್ಲಾಪುರ ಬಹುಬೇಗ ಔದ್ಯೋಗಿಕ ಪಟ್ಟಣವಾಗಿ ಬೆಳೆಯಿತು. ಸಮಾಜದ ಅಭಿವೃದ್ಧಿಯನ್ನೆ ತಲೆಯಲ್ಲಿ ತುಂಬಿಕೊಂಡಿದ್ದ ಅವರು ಸೊಲ್ಲಾಪುರದಲ್ಲಿ ವೀರಶೈವ ಅಸೋಶಿಯನ್‌ ಸಂಸ್ಥಾಪಿಸಿ ಅದಕ್ಕೆ ೨ಲಕ್ಷ ಹಣವನ್ನು ಸಂಗ್ರಹಿಸಿದು, ಅದಕ್ಕೆ ತಮ್ಮದೇ 126 ಎಕರೆ ಭೂಮಿ ಮತ್ತು 10,000 ರೂ. ದಾನ ಮಾಡಿದರು. ಇದರಿಂದ ಲಿಂಗಾಯತರು ತಾಂತ್ರಿಕ ಶಿಕ್ಷಣ ಪಡೆಲು ಸಹಾಯಕವಾಯಿತು. ಮಲ್ಲಪ್ಪನವರು ಮಾನವೋಪಕಾರಿ ಮಹಾಪುರಷರಾಗಿದ್ದರು ಎಂದರು.

ಈ ಸಂದರ್ಭದಲ್ಲಿ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ ಬಡ್ನಿ, ಆರ್.ಎನ್‌ ದೇಶಪಾಂಡೆ ಹಾಗೂ ಡಾ.ಎಸ್.ಸಿ ಚವಡಿ ಇದ್ದರು. ಪಂಚಾಕ್ಷರಯ್ಯ ಮರಿದೇವರಮಠ ಸ್ವಾಗತಿಸಿದರು. ಡಾ.ಗಿರೀಜಾ ಹಸಬಿ ನಿರೂಪಿಸಿದರು.

Exit mobile version