ಟೈರ್ ಗೆ ಬೆಂಕಿ ಹಚ್ಚಲು ಪೊಲೀಸರ ವಿರೋಧ: ಕರವೇ ಕಾರ್ಯಕರ್ತರ ಆಕ್ರೊಶ

karnataka rakshana vedike

ಟೈರ್ ಗೆ ಬೆಂಕಿ ಹಚ್ಚಲು ಪೊಲೀಸರ ವಿರೋಧ: ಕರವೇ ಕಾರ್ಯಕರ್ತರ ಆಕ್ರೊಶ

ಗದಗ: ಕರ್ನಾಟಕ ಬಂದ್ ಹಿನ್ನಲೆ, ಮುಳಗುಂದ ನಾಕಾ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಟೈರ್ ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು.

ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪ್ರತಿಭಟನಾಕಾರರು ಹಾಗೂ ಪೊಲೀಸರ ಮದ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟೈರ್ ಗೆ ಬೆಂಕಿ ಹಚ್ಚುವುದಾಗಿ ಟೈರ್ ಗೆ ಕರವೇ ಕಾರ್ಯಕರ್ತರು ಜೋತು ಬಿದ್ದರು.  ಈ ವೇಳೆ ಪ್ರತಿಭಟನಾಕಾರರಿಂದ ಪೊಲೀಸರು ಟೈರ್ ‌ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಬೂಟ್, ಚೆಪ್ಪಲಿ, ಕಟ್ಟಿಗೆಗೆ ಬೆಂಕಿ ಹಚ್ಚಿ ಕರವೇ ಕಾರ್ಯಕರ್ತರ ಆಕ್ರೋಶ ಹೊರಹಾಕುವ ಮೂಲಕ ಮುಳಗುಂದ ನಾಕಾದಲ್ಲಿ ಕರವೇ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

ಸರ್ಕಾರದ ಕೈಗೊಂಬೆ ಆಗಿ ಕೆಲಸ ಮಾಡಬೇಡಿ, ನಿಮ್ಮ ಕೆಲಸ ನೀವು ಮಾಡಿ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಕರವೇ ಕಾರ್ಯಕರ್ತರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು.

ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು.  ಬಸ್ ತಡೆದು ರಸ್ತೆ ತಡೆ ನಡೆಸಲು ಪ್ರತಿಭಟನಾಕಾರರು ಮುಂದಾದರು.

ಈ ವೇಳೆ ಹುಬ್ಬಳ್ಳಿ-ಗದಗ ಬಸ್ ತಡೆಯಲು ಕರವೇ ಕಾರ್ಯಕರ್ತನೋರ್ವ ಮುಂದಾದಾಗ ಸ್ವಲ್ಪದರಲ್ಲಿಯೇ ಬಚಾವ್ ಆದ ಘಟನೆ ನಡೆಯಿತು. ಬಸ್ ಡ್ರೈವರ್ ಜಾಗರೂಕತೆಯಿಂದ ಬಚಾವ್ ಆದ ಯುವಕನನ್ನು ಪೊಲೀಸರು ಬಸ್ ಅಡಿಯಿಂದ ಎಳೆದು ಹೊರ ಹಾಕಿದರು.

ಕರವೇ ರಾಜ್ಯ ಮುಖಂಡ ಎಚ್.ಎಸ್.ಸೋಂಪೂರ, ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ನೇತೃತ್ವದಲ್ಲಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Exit mobile version