ಗಜೇಂದ್ರಗಡ : ಬಂದ್ ಕರೆಗೆ ಕೋಟೆ ನಾಡು ಸ್ಥಬ್ಧ..!

gajendragad karnataka bandh

ಗಜೇಂದ್ರಗಡ : ಬಂದ್ ಕರೆಗೆ ಕೋಟೆ ನಾಡು ಸ್ಥಬ್ಧ..!

ಗಜೇಂದ್ರಗಡ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿ ವಿವಿಧ ಸಂಘಟನೆಗಳಿಂದ ನೀಡಿದ ಕರ್ನಾಟಕ ಬಂದ್ ಕರೆಗೆ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

ಕಾರ್ಮಿಕ ಹಾಗೂ ಜನಪರ ಸಂಘಟನೆಗಳು ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದವು. ಪಟ್ಟಣದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಎಪಿಎಂಸಿ ಮಾರುಕಟ್ಟೆ ಬಿಕೋ ಎನ್ನುತ್ತಿದ್ದವು.

ಜನರಿಂದ ಗಿಜಿಗುಡುತ್ತಿದ್ದ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸ್ಥಬ್ದಗೊಂಡಿತ್ತು. ಬೆಳಂ ಬೆಳಿಗ್ಗೆಯಿಂದಲೇ ಹೋರಾಟಗಾರರು ಬೀದಿಗಿಳಿದು, ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಅಂಗಡಿ ಮಾಲಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಅಂಗಡಿ ಮಾಲಿಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಬೈಕ್ ರ್ಯಾಲಿ ನಡೆಸುವ ಮೂಲಕ ರೈತ ವಿರೋಧಿ ಮಸೋಧೆ ಹಿಂಪಡೆಲು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದರು.

ವಿವಿಧ ಸಂಘಟನೆ ಮುಖಂಡ ರಾದ ಅಶೋಕ ಬಾಗಮಾರ, ಎಂ.ಎಸ್.ಹಡಪದ, ಎಚ್.ಎಸ್. ಸೋಂಪೂರ, ವೀರಣ್ಣ ಸೊನ್ನದ, ಶಿವರಾಜ ಘೋರ್ಪಡೆ, ಯಲ್ಲಪ್ಪ ಬಂಕದ, ರಾಜು ಸಾಂಗ್ಲಿಕಾರ, ಶ್ರೀಧರ ಬಿದರಳ್ಳಿ‌ ಸೇರಿ ಹಲವರು ಪಾಲ್ಗೊಂಡಿದ್ದರು.

Exit mobile version