ಪುಸ್ತಕಗಳ ಸ್ಥಿತಿ ಕಂಡ ವಿದ್ಯಾರ್ಥಿಗಳು ಮಮ್ಮಲ ಮರಗುತ್ತಿದ್ದಾರೆ.

naragunda konnuru

ಕೊರನಾ ಕಾಟದಿಂದ ಇನ್ನು ಜನ ಮುಕ್ತಿಯಾಗಿಲ್ಲ. ಈಗಾಗಲೇ ಶಾಲೆ ಆರಂಭವಾಗದೇ ಅದೆಷ್ಟೋ ಗ್ರಾಮೀಣ ಮಕ್ಕಳು ಶಾಲೆ ತೆರೆಯುವುದನ್ನೇ ಕಾತುರದಿಂದ ಕಾಯುತ್ತಿದ್ದಾರೆ.

ಇದೀಗ ಕೊರೊನಾದಿಂದ ಕಂಗೆಟ್ಟ ಜನರಿಗೆ ಪ್ರವಾಹ ಗಾಯದ ಮೇಲೆ ಬರೆ ಎಳೆದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಮಲಪ್ರಭಾ ನದಿ ಪ್ರವಾಹ ಬಂದಿದ್ದು ಕೊಣ್ಣೂರು ಗ್ರಾಮದ ಜನರ ಬದುಕು ಮೂರಾಬಟ್ಟೆಯಾಗಿದೆ. ನಿನ್ನೆಯಷ್ಟೆ ಪ್ರವಾಹ ಇಳಿಕೆಯಾಗಿದ್ದು, ನದಿ ನೀರು ಒಳಹೊಕ್ಕ ಪರಿಣಾಮ ಪುಸ್ತಕಗಳೆಲ್ಲ ನೀರಿನಲ್ಲಿ ತೋಯ್ದಿವೆ. ಇದರಿಂದ ಪುಸ್ತಕಗಳ ಸ್ಥಿತಿ ಕಂಡ ವಿದ್ಯಾರ್ಥಿಗಳು ಮಮ್ಮಲ ಮರಗುತ್ತಿದ್ದಾರೆ.

Exit mobile version