ನಾನು ಧೋನಿ ಪಂದ್ಯ ವೀಕ್ಷಿಸಲು ಯುಎಇಗೆ ಹೋಗಲು ಯೋಚಿಸುತ್ತಿದ್ದೇನೆ

ms dhoni criket bcci

ನಾನು ಧೋನಿ ಪಂದ್ಯ ವೀಕ್ಷಿಸಲು ಯುಎಇಗೆ ಹೋಗಲು ಯೋಚಿಸುತ್ತಿದ್ದೇನೆ

ಬೆಂಗಳೂರು: 2005ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಭಾರತೀಯ ಕ್ರಿಕೆಟ್ ನ ಮಾಜಿ ನಾಯಕ ಎಂ.ಎಸ್. ಧೋನಿ 123 ಎಸೆತಗಳಿಗೆ 148 ರನ್ ಬಾರಿಸಿದ್ದರು. ಇದು ಅವರ ಮೊದಲ ಏಕದಿನ ಶತಕವಾಗಿತ್ತು.

ಈ ಪಂದ್ಯದಿಂದಲೇ ಅವರಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟುಕೊಂಡಿದ್ದರು. ಹೀಗೆ ಅವರ ಆಟ ನೋಡಿ, ನಗರದ ಯುವಕನೋರ್ವ ಆಟಗಾರನಾಗುವ ಬಯಕೆ ಹುಟ್ಟಿಸಿಕೊಂಡಿದ್ದ. ಅಲ್ಲದೇ, ಅಂದಿನಿಂದ ಧೋನಿ ಫ್ಯಾನ್ ಕೂಡ ಆಗಿದ್ದ.

ಈ ಹುಚ್ಚು ಅಭಿಮಾನಿಯೇ ಪ್ರಣವ್ ಜೈನ್. ಇವರು ತನ್ನ ಹೀರೋನನ್ನು ಸುಮಾರು 15 ವರ್ಷಗಳಿಂದಲೂ ಹಿಂಬಾಲಿಸುತ್ತಿದ್ದಾರೆ. ಸದ್ಯ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಈಗಲೂ ಪ್ರಣವ್, ಧೋನಿಯನ್ನೂ ಹಿಂಬಾಲಿಸುವುದನ್ನು ಬಿಟ್ಟಿಲ್ಲ. ಕೇವಲ ರಾಜ್ಯವಷ್ಟೇ ಅಲ್ಲ, ಬೇರೆ ದೇಶ, ಸ್ಟೇಡಿಯಂ, ಹೊಟೇಲ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಇದ್ದರೂ ಧೋನಿಯ ಜೊತೆ ಒಂದಿಷ್ಟು ಕ್ಷಣ ಕಳೆಯುತ್ತಿದ್ದರು.

ಸದ್ಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅವರು ಆಡಲಿದ್ದಾರೆ. ಈ ನಿಟ್ಟಿನಲ್ಲಿ ತನ್ನ ನೆಚ್ಚಿನ ಆಟಗಾರನ ಆಟ ನೋಡುವುದಕ್ಕೋಸ್ಕರವೇ ಪ್ರಣವ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹೋಗಲು ಯೋಚಿಸುತ್ತಿದ್ದಾರೆ. ನಾನು ಧೋನಿ ಪಂದ್ಯ ವೀಕ್ಷಿಸುವುದಕ್ಕೋಸ್ಕರ ಯುಎಇಗೆ ಹೋಗಲು ಯೋಚಿಸುತ್ತಿದ್ದೇನೆ ಎಂದಿದ್ದಾರೆ.

ಇಲ್ಲಿಯವರೆಗೆ ಧೋನಿ ಅವರ 165 ಆಟೋಗ್ರಾಫ್‌ಗಳಿವೆ. ಕ್ರಿಕೆಟ್ ಬ್ಯಾಟ್‌ಗಳು, ಮ್ಯಾಚ್ ಟಿಕೇಟ್‌ಗಳು, ಸ್ಟ್ಯಾಂಪ್‌ಗಳು, ಮಿನಿಯೇಚರ್ ಬ್ಯಾಟ್‌ಗಳು, ಫೋಟೋಗಳು ಇನ್ನಿತರ ವಸ್ತುಗಳ ಮೇಲೆ ಧೋನಿಯ ಹಸ್ತಾಕ್ಷರ ಪಡೆದು ಸಂಗ್ರಹಿಸಿಟ್ಟಿದ್ದೇನೆ. ಈ ಆಟೋಗ್ರಾಫ್‌ಗಳನ್ನು 183 ಸಂಖ್ಯೆಗೆ ಮುಟ್ಟಿಸುವುದು ನನ್ನ ಕನಸು. 183 ನಂಬರ್ ಯಾಕೆಂದರೆ ಧೋನಿ ಅವರು 2005ರಲ್ಲಿ ಜೈಪುರದಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಅಜೇಯ 183 ರನ್ ಬಾರಿಸಿದ್ದರು. ಹೀಗಾಗಿ ಈ ಕನಸು ಕಂಡಿದ್ದೇನೆ ಎಂದು ಹೇಳಿದ್ದಾರೆ.

Exit mobile version