ವೀರಪ್ಪನ್ ಸಹಚರ ಸಾವು!

balavendran veerappan karnataka

ವೀರಪ್ಪನ್ ಸಹಚರ ಬಿಲವೇಂದ್ರನ್ ಸಾವು

ಮೈಸೂರು: ಚಾಮರಾಜನಗರ ಜಿಲ್ಲೆಯ ಗಡಿಭಾಗದ ಪಾಲಾರ್ ಸಮೀಪದ ಸೋರೆಕಾಯಿಮಡುವು ಬಳಿ ನೆಲಬಾಂಬ್ ಸ್ಪೋಟಿಸಿ 22  ಜನರ ಸಾವಿಗೆ  ಕಾರಣರಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮಲೆಮಹದೇಶ್ವರ ಸಮೀಪದ ಮಾರ್ಟಳ್ಳಿಯವನಾದ ಈತ ಕಳೆದ 25 ವರ್ಷಗಳಿಂದಲೂ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ. ಕೆ.ಆರ್.ಆಸ್ಪತ್ರೆಯಲ್ಲಿ ಬಿಲವೇಂದ್ರನ್, ತಡರಾತ್ರಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಮತ್ತೆ ಪ್ರವಾಹ.. ಉತ್ತರ ಕರ್ನಾಟಕಕ್ಕೆ ಮತ್ತೆ ಸಂಕಷ್ಟ

ಹತ್ತು ದಿನಗಳ ಹಿಂದೆ ಜೈಲಿನಲ್ಲಿ ಪ್ರಜ್ಞಾಶೂನ್ಯನಾಗಿದ್ದ ಈತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರಸಂಬಂಧಿ ಸಮಸ್ಯೆಗಳಿಂದಾಗಿ ಈತ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಈತನ ಶಿಕ್ಷೆಯ ಪ್ರಮಾಣವನ್ನು ನಂತರ‌ ಜೀವಾವಧಿ‌‌‌ ಶಿಕ್ಷೆಗೆ ಪರಿವರ್ತಿಸಲಾಗಿತ್ತು.

ಇದನ್ನೂ ಓದಿ: ಕೊರೋನಾ ಹಾಗೂ ಲಾಕ್‌ಡೌನ್‌ದಿಂದ ಭಾರತದ ಅರ್ಥಿಕತೆಯ ಮೇಲಾದ ಪರಿಣಾಮ

Exit mobile version