ಉಗ್ರರಿಗೆ ಚಿಕಿತ್ಸೆ ನೀಡಲು, ಶಸ್ತ್ರಾಸ್ತ್ರ ಪೂರೈಸುವುದಕ್ಕಾಗಿಯೇ ಈತ ಮಾಡಿದ್ದೇನು?

Isis abdul eye

ಉಗ್ರರಿಗೆ ಚಿಕಿತ್ಸೆ ನೀಡಲು, ಶಸ್ತ್ರಾಸ್ತ್ರ ಪೂರೈಸುವುದಕ್ಕಾಗಿಯೇ ಈತ ಮಾಡಿದ್ದೇನು?

ಐಸಿಸ್ ನ ಉಗ್ರರಿಗೆ ವೈದ್ಯಕೀಯ ಸೇವೆ ಒದಗಿಸುವುದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಲು ರಹಸ್ಯವಾಗಿ ಸಂವಹನ ನಡೆಸುವುದಕ್ಕಾಗಿ ಪ್ರತ್ಯೇಕ ಆಪ್ ಗಳನ್ನು ನಗರ ಮೂಲದ ನೇತ್ರ ವೈದ್ಯನೊಬ್ಬ ಅಭಿವೃದ್ಧಿ ಪಡಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು: ಐಸಿಸ್ ನ ಉಗ್ರರಿಗೆ ವೈದ್ಯಕೀಯ ಸೇವೆ ಒದಗಿಸುವುದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಲು ರಹಸ್ಯವಾಗಿ ಸಂವಹನ ನಡೆಸುವುದಕ್ಕಾಗಿ ಪ್ರತ್ಯೇಕ ಆಪ್ ಗಳನ್ನು ನಗರ ಮೂಲದ ನೇತ್ರ ವೈದ್ಯನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದೆ.

ರಾಷ್ಟ್ರೀಯ ತನಿಖಾ ದಳ(ಎನ್ಐಎ) ಈ ವಿಷಯವನ್ನು ಬಹಿರಂಗಪಡಿಸಿದೆ. ಬಸವನಗುಡಿ ನಿವಾಸಿ ಡಾ. ಅಬ್ದುರ್ ರೆಹಮಾನ್(28) ಎಂಬ ವ್ಯಕ್ತಿಯೇ ಈ ಕೃತ್ಯ ಎಸಗುತ್ತಿದ್ದವ. ಈ ಕಾರಣದಿಂದ ಸದ್ಯ ಅಧಿಕಾರಿಗಳು ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಅಲ್ಲದೇ, ಆರೋಪಿಯ ಮನೆ ಸೇರಿದಂತೆ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿ ಮೊಬೈಲ್, ಕೆಮಿಕಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.  

ಜಗತ್ತಿನಲ್ಲಿ ಎಲ್ಲೇ ವಿಧ್ವಂಸಕ ಕೃತ್ಯ ನಡೆದರೂ ಈ ಸಂದರ್ಭದಲ್ಲಿ ಗಾಯಗೊಳ್ಳುವ ಐಸಿಸ್ ಶಂಕಿತ ಉಗ್ರರಿಗೆ ವೈದ್ಯಕೀಯ ಸೇವೆ ಒದಗಿಸಲು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಲು ರಹಸ್ಯವಾಗಿ ಸಂವಹನ ನಡೆಸುವ ಉದ್ಧೇಶದಿಂದ ಅಬ್ದುರ್ ಆಪ್ ಗಳನ್ನು ರೂಪಿಸುತ್ತಿದ್ದ, ಹಾಗೂ ಇದಕ್ಕಾಗಿ ಈತ ತರಬೇತಿ ಕೂಡ ಐಸಿಸ್ ನಲ್ಲಿಯೇ ಪಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version