ಆನ್‍ಲೈನ್ ಮೂಲಕ ಐ.ಟಿ.ಐ ಕೋರ್ಸಗಳಿಗೆ ಪ್ರವೇಶಾತಿ

ITI Karnataka

ಆನ್ಲೈದನ್ ಮೂಲಕ ಐ.ಟಿ.ಐ ಕೋರ್ಸಗಳಿಗೆ ಪ್ರವೇಶಾತಿ

ಗದಗ: ರಾಜ್ಯದ 270 ಸರಕಾರಿ ಹಾಗೂ 196 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅಗಷ್ಟ-2020 ನೇ ಸಾಲಿಗೆ ಮೆರಿಟ್-ಕಂ-ರಿಸರ್ವೇಷನ್ ಆಧಾರಿತ ಪ್ರವೇಶಗಳನ್ನು ಆನ್‍ಲೈನ್ ಮುಖಾಂತರ ಮಾಡಲಾಗುತ್ತಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಸರಕಾರಿ/ಅನುದಾನಿತ ಐ.ಟಿ.ಐಗಳಲ್ಲಿ ಸಿ.ಟಿ.ಎಸ್ ಯೋಜನೆ ಅಡಿಯಲ್ಲಿ ತಾಂತ್ರಿಕ/ ತಾಂತ್ರಿಕೇತರ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಇಲಾಖೆಯ ವೆಬ್‍ಸೈಟ್ ವಿಳಾಸ- www.emptrg.kar.nic.in ಮೂಲಕ ಅಗಸ್ಟ 31 ರವರೆಗೆ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

ಗದಗ ಜಿಲ್ಲೆಯ 9 ಸರಕಾರಿ ಐ.ಟಿ.ಐಗಳಾದ ಗದಗ, ಮುಂಡರಗಿ, ನರಗುಂದ, ಶಿರಹಟ್ಟಿ, ಸೂಡಿ, ಹೊಂಬಳ, ಸೊರಟೂರ, ಕುರ್ತಕೋಟಿ, ಯಾವಗಲ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ  ಹಾಗೂ 7 ಅನುದಾನಿತ ಐ.ಟಿ.ಐಗಳಾದ ಗದಗನ ಸರ್ ಸಿದ್ಧಪ್ಪ ಕಂಬಳಿ ಖಾಸಗಿ ಐ.ಟಿಐ, ಡಂಬಳದ ಜಗದ್ಗುರು ತೋಂಟದಾರ್ಯ ಖಾಸಗಿ ಐಟಿಐ,  ಲಕ್ಷ್ಮೇಶ್ವರದ ಬಾಪೂಜಿ ಖಾಸಗಿ ಐ.ಟಿ.ಐ, ಹೊಳೆಆಲೂರನ ಸಂಜಯ ಗ್ರಾಮೀಣ ವಿದ್ಯಾ ಸಂಸ್ಥೆಯ ಐ.ಟಿ.ಐ, ಗಜೇಂದ್ರಗಡದ ಶ್ರೀ ಜಗದ್ಗುರು ಅನ್ನದಾನೇಶ್ವರ  ಖಾಸಗಿ ಐ.ಟಿ.ಐ,  ನರೇಗಲ್‍ದ ಕೊಟ್ಟೂರು ಸ್ವಾಮಿ ಖಾಸಗಿ ಐ.ಟಿ.ಐ, ಶಿರೋಳದ ಮಾದಾರ ಚನ್ನಯ್ಯ ಖಾಸಗಿ ಐ.ಟಿ.ಐ  ಕಾಲೇಜುಗಳಲ್ಲಿ ಆನ್‍ಲೈನ್ ಮುಖಾಂತರ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರ ಕಾರ್ಯಾಲಯ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗದಗ ಬೆಟಗೇರಿ 582101 ದೂರವಾಣಿ ಸಂಖ್ಯೆ 08372-245018 ಅಥವಾ ಇಲಾಖೆ ವೆಬ್‍ಸೈಟ್ www.emptrg.kar.nic.in ಸಂಪರ್ಕಿಸಬಹುದಾಗಿದೆ.

Exit mobile version