ಇಂದು ಸ್ವಾಂತಂತ್ರ್ಯ ದಿನಾಚರಣೆ ನಿಮಿತ್ಯ, ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿದರು.

ಗದಗ: ಜಿಲ್ಲೆ ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಹೆಸರಾಗಿದ್ದು ಅದರಂತೆ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಹ ಜಿಲ್ಲೆಯ ಪಾತ್ರ ಅವಿಸ್ಮರಣೀಯವಾಗಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.

ಗದಗ-ಬೆಟಗೇರಿ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಸ್ವಾತಂತ್ರ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದಂತಹ ಮಹನೀಯರ ಸ್ಮರಿಸುವ ದಿನವಾಗಿದೆ. ಅವರಲ್ಲರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸವಿಸುಖವನ್ನು ಪಡೆಯುತ್ತಿರುವ ನಾವು ಹೋರಾಟದ ಯಶೋಗಾಥೆಯನ್ನು ನೆನಪಿಸಿಕೊಂಡು ಗೌರವ ನಮನ ಸಮರ್ಪಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನರಗುಂದ ಬಂಡಾಯ, ಮುಂಡರಗಿ ಭೀಮರಾಯರ ಹೋರಾಟಗಳು ಹೆಮ್ಮೆಯ ಸಂಗತಿಗಳಾಗಿದ್ದು 1942ರ ಭಾರತ ಬಿಟ್ಟು ತೊಳಗಿ ಚಳುವಳಿಯಲ್ಲಿ ಜಿಲ್ಲೆಯ ನೂರಾರು ಹೋರಾಟಗಾರರು ಭಾಗವಹಿಸಿ ದೇಶದ ಸ್ವಾತಂತ್ರಕ್ಕಾಗಿ ಪ್ರಾಣಾರ್ಪಣೆ ಮಾಡಿರುತ್ತಾರೆ ಎಂದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸಿ.ಸಿ.ಪಾಟೀಲ್

ಕೊರೊನಾ ಮುಂಜಾಗೃತೆ

ಜಿಲ್ಲೆಯಲ್ಲಿ ಕೋರೊನಾ ಸೋಂಕು ನಿಯಂತ್ರಣಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಪಿ.ಸಿ.ಆರ್. ಮಷಿನ್ ಮತ್ತು ಇಪ್ಪತ್ತು ಮಲ್ಟಿ ಚಾನಲ್ ಮಾನಿಟರ ಖರೀದಿಗೆ ಅರವತ್ತು ಲಕ್ಷ, ಕೇಂದ್ರಿಕೃತಿ ಆಮ್ಲ ಜನಕ, ನೈಟ್ರೋಜನ ಹಾಗೂ ಇತರೆ ಸಾಮಗ್ರಿ ಖರೀದಿಗಾಗಿ ಎಪ್ಪತ್ತು ಲಕ್ಷ ಸೇರಿದಂತೆ ಒಟ್ಟು ಒಂದು ಕೋಟಿ ಅರವತ್ತು ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ.

ಸೋಂಕಿತರಿಗೆ ಚಿಕಿತ್ಸೆ ನೀಡಲು ಒಟ್ಟು 1010 ಹಾಸಿಗೆಗಳ ಸೌಲಭ್ಯವಿರುವ 12 ಕೋವಿಡ್ ಆರೈಕೆ ಕೇಂದ್ರಗಳನ್ನು ಗುರುತಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ವರೆಗೆ ಒಟ್ಟು 1396 ವ್ಯಕ್ತಿಗಳು ಸೋಂಕಿನಿಂದ ಗುಣಮುಖರಾಗಿರುತ್ತಾರೆ ಅಲ್ಲದೇ ಕೋವಿಡ್ ಸೋಂಕಿತರು ಶೀಘ್ರ ಗುಣಮುಖರಾಗಲು ರಾಜ್ಯ ಸರಕಾರದಿಂದ ರೆಮಡಿಸ್‍ವೇರ್ ಇಂಜೆಕ್ಷನ್ ಪಡೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾ ಪಂಚಾಯತ ವತಿಯಿಂದ ಸ್ವಸಹಾಯ ಗುಂಪುಗಳ ಸಹಕಾರದೊಂದಿಗೆ 6 ಲಕ್ಷ ಮಾಸ್ಕಗಳನ್ನು ತಯಾರಿಸಿ ಉಚಿತವಾಗಿ ವಿತರಿಸಲಾಗಿದೆ. ಜಿಲ್ಲೆಯ 122 ಗ್ರಾಮ ಪಂಚಾಯತಗಳಿಗೆ ಪಲ್ಸ್ ಆಕ್ಸಿ ಮೀಟರ್ ಗಳನ್ನು ವಿತರಿಸಲಾಗಿದೆ.

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ 43 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿರುತ್ತದೆ ಎಂದರು.

ಉದ್ಯೋಗ ಖಾತ್ರಿ

ಮಹಾತ್ಮಾ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯಡಿ 61.04 ಕೋಟಿ ರೂ. ಆರ್ಥಿಕ ಸಾಧನೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಲ್ಲಿ 37 ಗ್ರಾಮಗಳಿಗೆ ತಲಾ ಒಂದು ಕೋಟಿ ಅನುದಾನ ಹಂಚಿಕೆಯಲ್ಲಿ ಪ್ರಸ್ತುತ 17.77 ಕೋಟಿ ರೂ. ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಬಡ ಜನರಿಗೆ ಸೂರು ಕಲ್ಪಿಸುವ ವಸತಿ ಯೋಜನೆಯಡಿ 502 ಫಲಾನುಭವಿಗಳ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿರುತ್ತದೆ. 3468 ಮನೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿರುತ್ತವೆ.

ಮಳೆಯ ಪ್ರಮಾಣ

ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು ವಾರ್ಷಿಕ ಸರಾಸರಿ ಮಳೆ ಪ್ರಮಾಣ 656 ಮಿ.ಮಿ. ಇದ್ದು ಈ ವರೆಗೆ ಶೇ.87 ರಷ್ಟು ಬಿತ್ತನೆಯಾಗಿರುತ್ತದೆ.

ಭಾಗ್ಯ ಲಕ್ಷ್ಮೀ ಯೋಜನೆ

ಭಾಗ್ಯ ಲಕ್ಷ್ಮೀ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 72,346 ಫಲಾನುಭವಿಗಳಿಗೆ ಮಂಜೂರಾತಿ ನೀಡಲಾಗಿರುತ್ತದೆ.

ಅವಳಿ ನಗರದಲ್ಲಿ ವಸತಿ ಯೋಜನೆ

ಗದಗ-ಬೆಟಗೇರಿ ಅವಳಿ ನಗರದಲ್ಲಿ ವಸತಿ ರಹಿತ ಹರಣ ಶಿಕಾರಿ ಸಮುದಾಯದವರಿಗೆ 109 ಮನೆಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇವುಗಳಲ್ಲಿ 40 ಮನೆಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ 619 ಫಲಾನುಭವಿಗಳಿಗೆ ಅರಣ್ಯ ಹಕ್ಕು ಪತ್ರ ನೀಡಲಾಗಿದ್ದು ಒಟ್ಟು 1174 ಎಕರೆ ಅರಣ್ಯ ಭೂಮಿ ಮಂಜೂರು ಮಾಡಲಾಗಿರುತ್ತದೆ.

ಜಿಲ್ಲೆಯಲ್ಲಿ ನೋಂದಣಿಯಾದ 25080 ಕಟ್ಟಡ ಕಾರ್ಮಿಕರಲ್ಲಿ 23381 ಕಾರ್ಮಿಕರಿಗೆ ಐದು ಸಾವರ ರೂ ಕೋವಿಡ್ ಪರಿಹಾರ ಸಹಾಯಧನ ವಿತರಿಸಲಾಗಿದ್ದು ಕ್ಷೌರಿಕ ಹಾಗೂ ಅಗಸ ವರ್ಗದ ಕಾರ್ಮಿಕರಿಗೆ 3120 ಫಲಾನುಭವಿಗಳಿಗೆ ಐದು ಸಾವಿರ ಪರಿಹಾರ ಮೊತ್ತ ಮಂಜೂರಾಗಿದ್ದು 1997 ಜನರಿಗೆ ಸಹಾಯಧನ ವಿತರಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

ಆಶಾ ಕಾರ್ಯಕರ್ತೆಯನ್ನು ಸನ್ಮಾನಿಸಿದ ಸಚಿವ ಸಿ.ಸಿ.ಪಾಟೀಲ್

ಸನ್ಮಾನಿತರು

ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಶಾ ಕಾರ್ಯಕರ್ತೆಯರು, ವೈದ್ಯ ಶಿಕ್ಷಣ ಇಲಾಖೆ, ಶುಶ್ರೂಕರು, ಪೌರಕಾರ್ಮಿಕರು, ಪೋಲಿಸ್, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಗ್ನಿ ಶಾಮಕ ಹಾಗೂ 108 ಅಂಬುಲೆನ್ಸ ಚಾಲಕರಿಗೆ ಸಚಿವರು ಸನ್ಮಾನಿಸಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಗೌಡ ಕೆಂಚನಗೌಡ್ರ, ಶಾಸಕ ಎಚ್.ಕೆ.ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಶೋಭಾ ಮೇಟಿ, ಗದಗ ತಾ.ಪಂ ಅಧ್ಯಕ್ಷ ಶರಣಬಸನಗೌಡ ಪಾಟೀಲ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಯತೀಶ ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಗಣ್ಯರು, ಜಿಲ್ಲಾ ಮಟ್ಟದ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ದತ್ತಪ್ರಸನ್ ಪಾಟೀಲ ಹಾಗೂ ಲಕ್ಷ್ಮೀದೇವಿ ಗವಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ 307 ಪಾಸಿಟಿವ್: ಕೊರೊನಾದಿಂದ ಮೃತರಾದವರ ವಿವರ

ಗದಗ: ಜಿಲ್ಲೆಯಲ್ಲಿ ಶನಿವಾರ 307 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 23037 ಏರಿಕೆಯಾಗಿದೆ. ಇನ್ನು ಶನಿವಾರ ಕೊರೊನಾ ಸೋಂಕಿನಿಂದ ಐವರು ಸಾವನ್ನಪ್ಪಿದ್ದು ಈ ಮೂಲಕ ವರೆಗೆ 241 ಜನ ಜಿಲ್ಲೆಯಲ್ಲಿ ಸಾವನ್ನಪ್ಪಿದಂತಾಗಿದೆ.

ಅಬ್ಯರ್ಥಿ ಗೆದ್ದಿದ್ದಾರೆ ಆದರೆ ಗೆಲುವು ಸಂಭ್ರಮಿಸಲು ಅವರೆ ಇಲ್ಲ

ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಇನ್ನೇನು ಫಲಿತಾಂಶ ಹೊರಬರುವುದು ಬಾಕಿ ಇತ್ತು. ಆದರೆ ಫಲಿತಾಂಶ ನಾಯಿತು ಎಂದು ನೋಡಲು, ಕೇಳಲು ನಿಂತ ವ್ಯಕ್ತಿಯೇ ಇಲ್ಲ.

ಸಾರಿಗೆ ಸಿಬ್ಬಂದಿಗಳಿಗೆ ಸಂಬಳವೇ ಇಲ್ಲ! ಇನ್ನು ದೀಪಾವಳಿ ಆಚರಣೆ ಹೇಗೆ?

ನಾಡಿನಲ್ಲಿ ಪ್ರಮುಖವಾಗಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಆದರೆ ಬೆಳಕಿನ ಹಬ್ಬ ಸಾರಿಗೆ ಸಿಬ್ಬಂದಿಗಳಿಗೆ ಮಾತ್ರ ಕತ್ತಲಲ್ಲಿಟ್ಟಂತಾಗಿದೆ.

ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ!

ಬೆಂಗಳೂರು : ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಕುರಿತು ಆರೋಗ್ಯ…